Monday, March 2, 2026

spot_img

ಅಕ್ರಮ ಕೋಣ ಸಾಗಾಟ, ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ನಾಲ್ವರು ವಶಕ್ಕೆ

ಕುಂದಾಪುರ: ಅಕ್ರಮವಾಗಿ ಕೋಣಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡುತ್ತಿದ್ದವರನ್ನು ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ಅಮಾಸೆಬೈಲು ಪೊಲೀಸ್‌ ವಶಕ್ಕೆ ಪಡೆದ ಘಟನೆ ನಡೆದಿದೆ. ಬಸವರಾಜ (27), ಮೇಘರಾಜ್, ಲೋಹಿತ್ (27) ಇಮ್ರಾನ್ (24) ಬಂಧಿತ ಆರೋಪಿಗಳು.

 ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಮುತ್ತಿನಕಟ್ಟೆಯ ಬಳಿ ಹೊಸಂಗಡಿ ಚೆಕ್ ಪೋಸ್ಟ್ ನಲ್ಲಿ ವಾಹನ ಚೆಕಿಂಗ್‌ ನಡೆಸುತ್ತಿದ್ದ ವೇಳೆ ಹುಲಿಕಲ್ ಘಾಟಿ ಕಡೆಯಿಂದ ಚೆಕ್ ಪೊಸ್ಟ್ ಕಡೆಗೆ ಬರುತ್ತಿದ್ದ ವಾಹನವನ್ನು ತಡೆದು ಪರೀಶಿಲಿಸಿದಾಗ ಎರಡು ಕೋಣಗಳು ಪತ್ತೆಯಾಗಿದೆ.

ಈ ಕುರಿತು ವಾಹನ ಚಾಲಕನ ಬಳಿ ವಿಚಾರಿಸಿದಾಗ ಮಾಂಸಕ್ಕಾಗಿ ಸಾಗಾಟ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಕ್ರಮ ಜಾನುವಾರು ಸಾಗಟದ ಹಿನ್ನಲೆಯಲ್ಲಿ ನಾಲ್ವರು ಆರೋಪಿಗಳನ್ನು, ಜಾನುವಾರುಗಳು, ಅವುಗಳನ್ನು ತಂದ ವಾಹನ ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles