ಉಡುಪಿ: ಅಂಬಲಪಾಡಿ ಬಾಲಗಣೇಶೋತ್ಸವ ಸಮಿತಿಯ ವತಿಯಿಂದ 49ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಆ. 27ರಿಂದ 30ರವರೆಗೆ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಎದುರು ಜರಗಲಿದೆ.

ಆ ಪ್ರಯುಕ್ತ ಆ. 27ರಂದು ಬೆಳಗ್ಗೆ 10.35ಕ್ಕೆ ಗಣೇಶ ವಿಗ್ರಹ ಪ್ರತಿಷ್ಠೆ ಮಧ್ಯಾಹ್ನ 12ಕ್ಕೆ ಮಹಾಪೂಜೆ, ಕದಳಿಸೇವೆ, ಸಂಜೆ 4.30ರಿಂದ ಅಮ್ಮ ಗ್ರೀಮ್ಸ್ ಮೆಲೋಡಿಸ್ ಅವರಿಂದ ಭಕ್ತಿ ಗೀತಾ ಗಾಯನ, ರಾತ್ರಿ 7ರಿಂದ ರಂಗಪೂಜೆ, 8ರಿಂದ ಅಂಬಲಪಾಡಿ ರಂಗಚಾವಡಿ ತಂಡದವರಿಂದ ಮದಿಮೆದ ಇಲ್ಲಡ್ ತುಳು ನಾಟಕ.

28ರಂದು ಬೆಳಗ್ಗೆ 11ರಿಂದ ನಾಗಪೂಜೆ, ಮಹಾಪೂಜೆ, ರಾತ್ರಿ 7ರಿಂದ ರಂಗಪೂಜೆ, ಬಳಿಕ ಉಡುಪಿ ಅಭಿಜ್ಞಾ ನೃತ್ಯಭೂಮಿ ಟ್ರಸ್ಟ್ ಅವರಿಂದ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಹಾಗೂ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿ ನಡೆಯಲಿದೆ. ಆ. 29ರಂದು ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ 7ರಿಂದ ರಂಗಪೂಜೆ, ಬಳಿಕ ಸೃಷ್ಟಿ ಕಲಾವಿದೆರ್ ಬಜಗೋಳಿ ಅಭಿನಯದ ತುಳು ನಾಟಕ ದೈವ ದೃಷ್ಟಿ ಆ. 30ರಂದು ಬೆಳಗ್ಗೆ 10ಕ್ಕೆ ಗಣಯಾಗ, ಮಧ್ಯಾಹ್ನ 1ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ಸಂಜೆ 4ರಿಂದ ಚಿ। ಪ್ರಣವ್ ಅಡಿಗ ಅಂಬಲಪಾಡಿ ಅವರಿಂದ ಬಾಲವೇಣುನಾದ ಕಾರ್ಯಕ್ರಮ, ಸಂಜೆ 5ಗಂಟೆಗೆ ಲಕ್ಕಿಡಿಪ್ ಡ್ರಾ. 5.30ರಿಂದ ವಿಸರ್ಜನಾ ಪೂಜೆ, ವಿಸರ್ಜನಾ ಮೆರವಣಿಗೆಯು ನಡೆಯಲಿದೆ.