Wednesday, March 4, 2026

spot_img

ಅಂದರ್–ಬಾಹರ್ ಜುಗಾರಿ ಆಟ : ಮೂವರು ಬಂಧನ

ಉಡುಪಿ :ಕುಂದಾಪುರ ಸಮೀಪದ ಕಾಳಾವರ ಗ್ರಾಮದ ಅರೆಕಲ್ಲು ಜನತಾ ಕಾಲೂನಿ ಹತ್ತಿರದ ಸರ್ಕಾರಿ ಹಾಡಿಯಲ್ಲಿ ಅಂದರ್–ಬಾಹರ್ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ ವೇಳೆ ಪೊಲೀಸರ ದಾಳಿಗೆ ಮೂವರು ಸಿಕ್ಕಿಬಿದ್ದಿದ್ದಾರೆ. ರಾಕೇಶ್ (24), ಮ್ಯಾಕ್ಸಿ ರೋಶನ್ (39), ಸತೀಶ್ (37) ಬಂಧಿತರು.

 ಡಿ.21ರಂದು ಮಧ್ಯರಾತ್ರಿ 12.10ರ ಸುಮಾರಿಗೆ ಕುಂದಾಪುರ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ, ಜುಗಾರಿಗೆ ಬಳಸಿದ್ದ 4,450 ರೂಪಾಯಿ ನಗದು, ಇಸ್ಪೀಟು ಎಲೆಗಳು ಹಾಗೂ ಹಳೆಯ ನ್ಯೂಸ್‌ಪೇಪರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕಾಶ, ರಾಜೇಶ್ ಮತ್ತು ಸುಜನ್ ಎಂಬವರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಕುರಿತು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಪ್ರಕರಣ ದಾಖಲಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles