Thursday, October 23, 2025

spot_img

ಅಂಗನವಾಡಿ ನೌಕರರಿಗೆ ಸಾಮಾಜಿಕ ಸಮೀಕ್ಷೆಗೆ ರಿಯಾಯಿತಿ ನೀಡಲು ಆಗ್ರಹಿಸಿ ಧರಣಿ

ಉಡುಪಿ : ಸಾಮಾಜಿಕೆ ಸಮೀಕ್ಷೆ ಮಾಡದ ಅನಾರೋಗ್ಯ ಪೀಡಿತ ಮಹಿಳೆಯರಿಗೆ ಸಮೀಕ್ಷೆಯಿಂದ ರಿಯಾಯಿತಿ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು. ಧರಣಿಯನ್ನುದ್ದೇಶಿಸಿ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲ ನಾಡ ಮಾತನಾಡಿ, ಕೆಲವು ಅಂಗನವಾಡಿ ನೌಕರರು ಕೆಲವು ಸಮಸ್ಯೆಗಳಿಗಾಗಿ ಸಮೀಕ್ಷೆಯಿಂದ ರಿಯಾಯಿತಿ ಕೇಳಿದರೂ ಜನಪ್ರತಿನಿಧಿ ಕಾಯ್ದೆಯಡಿ ವಜಾ ಮಾಡಲಾಗುವುದು ಎಂದು ಅಧಿಕಾರಿಗಳು ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣಾ ಆಯೋಗದ ಸುತ್ತೋಲೆಯಲ್ಲಿ ಮತಗಟ್ಟೆ ಅಧಿಕಾರಿ ಹಾಗೂ ಸಾಮಾಜಿಕ ಸಮೀಕ್ಷೆಗೆ ಸಿ ದರ್ಜೆ ನೌಕರರನ್ನು ನೇಮಿಸಿಕೊಳ್ಳಬೇಕು ಎಂದಿದ್ದರೂ ಸುತ್ತೋಲೆಯನ್ನು ಕೆಳ ಅಧಿಕಾರಿಗಳು ಕಡೆಗಣಿಸಿ ಅಧಿಕಾರಿಗಳು ನೌಕರರನ್ನು ಜೈಲಿಗೆ ಕಳುಹಿಸುವ ಬೆದರಿಕೆ ಮಹಿಳೆಯರಿಗೆ ಮಾನಸಿಕ ಹಿಂಸೆಯಾಗಿದೆ ಅಲ್ಲದೇ ಸಮೀಕ್ಷೆಯನ್ನು ಸ್ಥಳೀಯವಾಗಿ ನೀಡದೇ ಬೇರೆ ಬೇರೆ ದೂರದ ಗ್ರಾಮಗಳಿಗೆ ನಿಯೋಜಿಸಿರುವುದು ಅಂಗನವಾಡಿ ನೌಕರರಿಗೆ ಸಮಸ್ಯೆಯಾಗಿದೆ.ಈ ಕೆಲಸಗಳ ಜೊತೆ ಜೊತೆಗೆ ಎಫ್ ಎಸ್ ಆರ್ ಬಿಎಲ್ಓ ಕೆಲಸಗಳನ್ನು ಮಾಡಬೇಕು ಎಂದು ನೋಟಿಸ್ ನೀಡುತ್ತಿರುವುದು ನೌಕರರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೂಡ ಈ ಮಹಿಳೆಯರನ್ನು ಮಾನವೀಯತೆ ಇಲ್ಲದೆ ಗುಲಾಮರಂತೆ ದುಡಿಸುತ್ತಿದೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರಣಿ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಭಿದ್‌ ಗದ್ಯಾಳ್‌ ಅವರು ಮನವಿ ಸ್ವೀಕರಿಸಿ ಸಿ ದರ್ಜೆಯ ನೌಕರರು ಜಿಲ್ಲೆಯಲ್ಲಿ ಕಡಿಮೆ ಇರುವುದರಿಂದ ಅಂಗನವಾಡಿ ನೌಕರರು ಸಮೀಕ್ಷಗೆ ಕೈಜೋಡಿಸಬೇಕು ಇಲ್ಲವಾದಲ್ಲಿ ನೌಕರರ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಧರಣಿಯಲ್ಲಿ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷರಾದ ಭಾರತಿ, ಯಶೋಧ ಕೆ,ಆಶಾಲತಾ, ಶಾಂತ, ಪ್ರೇಮ, ಪ್ರಮೀಳಾ ಉಡುಪಿ, ಜಯಲಕ್ಷ್ಮಿ,ಸರೋಜ, ಸರೋಜಿನಿ ಬ್ರಹ್ಮಾವರ, ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ, ಜಿಲ್ಲಾ ಕೋಶಾಧಿಕಾರಿ ಕವಿರಾಜ್ ಎಸ್ ಕಾಂಚನ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles