Monday, August 25, 2025

spot_img

ಸೆ.22ರಿಂದ ಅ.2ರವರೆಗೆ ಉಡುಪಿ ದಸರಾ ದಶಮ ಸಂಭ್ರಮ – ಮಾತೃಸಂಗಮ – ದಾಂಡಿಯ

ಉಡುಪಿ : ಉಡುಪಿ ಸಾರ್ವಜನಿಕ ಶ್ರೀಶಾರದೋತ್ಸವ ಸಮಿತಿಯ ದಶಮ ವರ್ಷದ ಉಡುಪಿ ದಸರಾದ ಪ್ರಯುಕ್ತ ನಡೆಯಲಿರುವ “ಮಾತೃಸಂಗಮ” ಮತ್ತು ನವರಾತ್ರೆ ವೈಭವದ “ದಾಂಡಿಯಾ” ಕಾರ್ಯಕ್ರಮಗಳ ಬಗ್ಗೆ ಮಹಿಳಾ ಸದಸ್ಯರ ಪೂರ್ವಭಾವಿ ಸಭೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಈ ಬಾರಿಯ ಉಡುಪಿ ದಸರeವು ಸೆ. 22 ರಿಂದ ಅ. 3ರವರೆಗೆ ಪರ್ಯಾಯ ಶ್ರೀ ಪುತ್ತಿಗೆ ಮಠದ ಆಶ್ರಯದಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯಪಟ್ಟ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ವೈಭವದಿಂದ ನಡೆಸಲುದ್ದೇಶಿಸಲಾಗಿದೆ ಎಂದು ಶಾರದೋತ್ಸವ ಸಮಿತಿ ದ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ ಬೈಕಾಡಿ ಅವರು ಸಭೆಯಲ್ಲಿ ಹೇಳಿದರು.

ಉಡುಪಿ ದಸರ ದಶಮಾನೋತ್ಸವದಂಗವಾಗಿ ಮಾತೃಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ಸಂಚಾಲಕಿ ವೀಣಾ ಎಸ್. ಶೆಟ್ಟಿ ಅವರು, ಉಡುಪಿ ಜಿಲ್ಲೆಯ ಎಲ್ಲ ಭಜನಾ ಮಂಡಳಿ, ಮಹಿಳಾ ಮಂಡಳಿ, ಯೋಗ ಕೇಂದ್ರ, ಯುವತಿ ಮಂಡಳಿ, ಸ್ವಸಹಾಯ ಸಂಘಗಳು, ಉಡುಪಿ ನಗರ ಸಭೆಯ ಎಲ್ಲಾ ಚುನಾಯಿತ ಮಹಿಳಾ ಸದಸ್ಯರು, ನೃತ್ಯ, ಸಂಗೀತ, ಸಾಮಾಜಿಕ , ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿರುವ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಳೆದ ಬಾರಿಯಂತೆ ಈ ಬಾರಿಯೂ ದಾಂಡಿಯಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. 11 ದಿನಗಳ ಕಾಲ ನಡೆಯುವ ಈ ಶಾರದೋತ್ಸವ – ದಸರ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಪ್ರತಿದಿನ ಮಹಿಳೆಯರು ಸ್ವಯಂ ಸೇವಕಿಯರಾಗಿ ಕೆಲಸ ಮಾಡಬೇಕು. ಅದಕ್ಕಾಗಿ ಮಹಿಳಾ ಸ್ವಯಂಸೇವಕಿಯ ತಂಡವನ್ನು ರಚಿಸಲಾಗುವುದು ಎಂದು ದಶಮ ಸಂಭ್ರಮ ಸಮಿತಿದ ಪ್ರಧಾನ ಕಾರ್ಯದರ್ಶಿ ತಾರಾ ಉಮೇಶ್ ಆಚಾರ್ಯ ಹೇಳಿದರು. ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣಮೆಂಡನ್, ಮಾತೃಸಂಗಮದ ಸಂಚಾಲಕಿಯರಾದ ಪದ್ಮಾ ರತ್ನಾಕರ್, ಸರೋಜಾ ಯಶವಂತ್, ತಾರಾ ಸತೀಶ್ ಮತ್ತಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles