ಉಡುಪಿ : ಪರ್ಕಳದಲ್ಲಿ ಸಿಡಿಲೆರೆಗಿನ ಪರಿಣಾಮವಾಗಿ ಆಟೋ ರಿಕ್ಷಾಕ್ಕೆ ಹಾನಿಯಾಗಿದ ಘಟನೆ ಸಂಭವಿಸಿದೆ. ಪರ್ಕಳದ ಆಟೋ ಚಾಲಕರಾದ ಮಹಮ್ಮದ್ ಅವರು ಪರ್ಕಳದ ಪರೀಕ ಪ್ರದೇಶದಿಂದ ಮಣಿಪಾಲದ ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವೇಳೆ ದಿಡೀರ್ ಸಿಡಿಲು ಬಡಿದಿದೆ.

ಈ ವೇಳೆ ರಿಕ್ಷಾದೊಳಗೆ ಸೆಕೆಗಾಲದಲ್ಲಿ ಬಳಸುವ ಫ್ಯಾನ್‌ಗೆ ಸಿಡಿಲು ತಗುಲಿ ಅದು ಸಂಪೂರ್ಣ ಹಾನಿಗೊಳಗಾಗಿದೆ.



ಸಿ.ಎನ್.ಜಿ ರಿಕ್ಷಾ ಆಗಿದ್ದರಿಂದ ಯಾವುದೇ ಅಗ್ನಿ ಅವಘಡ ಸಂಭವಿಸದೆ, ಚಾಲಕ ಹಾಗೂ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಆಕಸ್ಮಿಕ ಘಟನೆದಿಂದ ಬೆಚ್ಚಿಬಿದ್ದ ಚಾಲಕ ದೇವರು ದೊಡ್ಡವನು ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ, ಪರ್ಕಳದ ಮೆಸ್ಕಾಂ ಕಚೇರಿಯ ಇನ್ವರ್ಟರ್ ವ್ಯವಸ್ಥೆಗೆ ಸಹ ಸಿಡಿಲೆರೆಗಿನ ಪರಿಣಾಮದಿಂದ ಹಾನಿ ಸಂಭವಿಸಿದ್ದು, ನಷ್ಟ ಉಂಟಾಗಿದೆ ಎಂದು ಕರ್ತವ್ಯ ನಿರತ ಲೈನ್‌ಮ್ಯಾನ್‌ಗಳು ತಿಳಿಸಿದ್ದಾರೆ.



