ಪ್ರಶ್ನಾರ್ಥಕವಾದ ಪಂಚಭೂತಗಳಿಂದ ವಾಸ್ತವ ಪರಿಸರ ಮತ್ತು ಮನುಷ್ಯರ ಸೃಷ್ಟಿ ಯಾಗಿದೆ. ಇಲ್ಲಿನ ಪ್ರತಿಯೊಂದು ಘಟನೆಗಳನ್ನೂ ಪಂಚಭೂತಗಳು ಆಂತರಿಕ(ದೇಹದ ಒಳಗೆ ಪಂಚಭೂತಗಳಿವೆ) ಮತ್ತು ಬಾಹ್ಯ (ಪರಿಸರದಲ್ಲಿರುವ ಅಗ್ನಿ,ಜಲ, ವಾಯು, ಆಕಾಶ ಮತ್ತು ಭೂಮಿ)ರೂಪದಲ್ಲಿ ಗಮನಿಸಿ, ಬ್ರಹ್ಮಾಂಡಕ್ಕೆ frequency ಮತ್ತು vibration ರೂಪದಲ್ಲಿ ಮಾಹಿತಿ ಕೊಡುತ್ತಾರೆ. ಬ್ರಹ್ಮಾಂಡದ ಶಕ್ತಿಗಳು ಆಯಾಯ ವ್ಯಕ್ತಿಗಳ ಕರ್ಮದ ಆಧಾರದ ಮೇಲೆ frequency ಮತ್ತು vibration ಗಳನ್ನು ಅವರವರ ದೇಹಕ್ಕೆ ಕಳುಹಿಸುವ ಕೆಲಸ ಮಾಡುತ್ತಾರೆ. ಅದು ಪುಣ್ಯದ ರೂಪದಲ್ಲಿ ಬಂದರೆ ನೆಮ್ಮದಿಯ ಜೀವನ. ಪಾಪದ ರೂಪದಲ್ಲಿ ಬಂದರೆ ಬದುಕು ದುಸ್ತರ. ಮಗು ಹುಟ್ಟುವ ಮೊದಲು ಹುಕ್ಕುಳ ಬಳ್ಳಿಯ ಮೂಲಕ ತಾಯಿಯ ತಂದೆಯ ಮತ್ತು ಹಿಂದಿನ ಜನ್ಮದ ಕರ್ಮಕ್ಕೆ ಸರಿಯಾಗಿ ತಾಯಿಯ ದೇಹದ ಪಂಚಭೂತಗಳ ಮೂಲಕ ಬ್ರಹ್ಮಾಂಡಕ್ಕೆ connect ಆಗಿರುತ್ತದೆ. ಮಗು ಹುಟ್ಟಿದ ತಕ್ಷಣ ಹುಕ್ಕುಳಬಳ್ಳಿ ಕತ್ತರಿಸಲ್ಪಡುತ್ತದೆ ಮತ್ತು ಭೂಮಿಗೆ ತಳ್ಳಲ್ಪಟ್ಟು ಬ್ರಹ್ಮಾಂಡ ಮತ್ತು ಪಂಚಭೂತಗಳಿಗೆ ನೇರವಾಗಿ connect ಆಗುತ್ತದೆ. ಈ ಬದಲಾವಣೆಯಿಂದಾಗಿ ಹುಟ್ಟಿದ ಕೂಡಲೇ ಕರ್ಮಕ್ಕೆ ಹೆದರುವ ಮಗುವಿನಲ್ಲಿರುವ ಆತ್ಮ ಮಗುವನ್ನು ಅಳಿಸುತ್ತದೆ. ಹುಟ್ಟಿದ ಎಲ್ಲಾ ಮಕ್ಕಳೂ ಅಳಬೇಕು, ಇದು ಪಂಚಭೂತಗಳ ಸಿದ್ಧಾಂತ. ಈ ಬ್ರಹ್ಮಾಂಡದ cc camara ವನ್ನು ಪಂಚಭೂತಗಳು ಗಮನಿಸುತ್ತಿರುತ್ತಾರೆ. ಹಾಗಾಗಿ ಸತ್ಕರ್ಮಗಳನ್ನು ಮಾತ್ರ ಮಾಡಿ ನೆಮ್ಮದಿಯ ಜೀವನ ಪಡೆಯಿರಿ. ಭೂಮಿಯಲ್ಲಿ ನಮ್ಮ ತಾಕತ್ತಿನಿಂದ ಎಲ್ಲವನ್ನೂ ಪಡೆಯಬಹುದು. ಆದರೆ ನೆಮ್ಮದಿಯ ಜೀವನ ಕೇವಲ ಕರ್ಮದ ಮೇಲೆಯೇ ನಿಂತಿರುತ್ತದೆ. ಇಲ್ಲಿ ನಾನು ಎನ್ನುವುದು ಮಿಥ್ಯ. ನನ್ನದು ಎನ್ನುವುದು ಅಹಂಕಾರ, ನನ್ನಿಂದಲೇ ಎಲ್ಲಾ ಎನ್ನುವುದು ದುರಹಂಕಾರ. ಸತ್ತ ಮೇಲೆ ಏನನ್ನು ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಿಲ್ಲವೋ ಅದು ನಮ್ಮದಲ್ಲ.
-Dharmasindhu Spiritual Life
