ಉಡುಪಿ : ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು,ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ 2025-26ನೇ ಸಾಲಿನ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ನಡೆಯಿತು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪ್ರಾಶುಂಪಾಲರಾದ ಡಾ. ಮಮತಾ ಕೆ.ವಿ., ವೈದ್ಯಕೀಯ ಅಧೀಕ್ಷಕರಾದ ಡಾ.ನಾಗಾರಾಜ ಎಸ್., ಸ್ನಾತಕೋತ್ತರ ವಿಭಾಗದ ಡೀನ್ ಡಾ. ಶ್ರೀಕಾಂತ್ ಪಿ, ಸ್ನಾತಕ ವಿಭಾಗದ ಡೀನ್ ಡಾ. ಪೃಥ್ವಿರಾಜ್ ಪುರಾಣಿಕ್, ಆಡಳಿತ ವಿಭಾಗ ಅಸೋಸಿಯೇಟ್ ಡೀನ್ ಡಾ. ಚೈತ್ರ, ಸ್ನಾತಕ ವಿದ್ಯಾರ್ಥಿಗಳಾದ ಶಿವಲಿಂಗಪ್ಪ, ಕು. ಧನ್ಯತಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಯಘ್ನೇಶ್ ದರ್ಭಾರ್ ಮತ್ತು ಡಾ. ದೀಕ್ಷಾ ಜೋಗಿ ಉಪಸ್ಥಿತರಿದ್ದರು.

ವಿದ್ಯಾರ್ಥಿ ಪರಿಷತ್ನ ಅಧ್ಯಕ್ಷ ಶಿವಲಿಂಗಪ್ಪ ಸ್ವಾಗತಿಸಿದರು. ಹೊಸದಾಗಿ ನೇಮಿಸಲಾದ ಸ್ನಾತಕ ಹಾಗೂ ಸ್ನಾತಕ್ಕೋತ್ತರ ಪರಿಷತ್ತಿನ ಪದಾಧಿಕಾರಿಗಳ ಹೆಸರನ್ನು ಡಾ. ಪ್ರಥ್ವಿರಾಜ್ ಪುರಾಣಿಕ್ ಮತ್ತು ಡಾ. ಶ್ರೀಕಾಂತ್ ಪಿ.ರವರು ಘೋಷಿಸಿದರು. ಡಾ. ಚೈತ್ರ ಪ್ರಮಾಣವಚನವನ್ನು ಬೋಧಿಸಿದರು. ಮಾಜಿ ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷರಾದ ಗುರುಗೋವಿಂದ್ ಅವರು 2024-25ನೇ ಸಾಲಿನ ವಾರ್ಷಿಕ ವರದಿಯನ್ನು ಹೊಸ ಅಧ್ಯಕ್ಷರಾದ ಶಿವಲಿಂಗಪ್ಪ ಮತ್ತು ಕಾರ್ಯದರ್ಶಿ ಕು. ಧನ್ಯತಾ ಎನ್. ಅವರಿಗೆ ಹಸ್ತಾಂತರಿಸಿದರು. ಗಣ್ಯರಿಂದ ಪರಿಷತ್ತಿನ ಬ್ಯಾಡ್ಜ್ಗಳನ್ನು ವಿತರಿಸಲಾಯಿತು. ಶಿವಲಿಂಗಪ್ಪ 2025-26ನೇ ಸಾಲಿನ ಕೌನ್ಸಿಲ್ ಯೋಜನೆಗಳನ್ನು ಸಭೆಗೆ ತಿಳಿಸಿ ಮುಂದಿನ ಕಾರ್ಯಯೋಜನೆಗಳನ್ನು ವಿವರಿಸಿದರು
ಕು. ಧನ್ಯತಾ ಎನ್ರವರು ಧನ್ಯವಾದ ಸಮರ್ಪಿಸಿದರು, ಕು. ಮಾನಸಿ ಡಿ. ಜೀರೆ ಸಮಾರಂಭವನ್ನುನಿರ್ವಹಿಸಿದರು ಮತ್ತು ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕರಾದ ಡಾ. ಪುನೀತ್ ಪಿ. ಅವರು ಸಂಯೋಜಿಸಿದರು.


