Tuesday, March 3, 2026

spot_img

ಶ್ರೀಕೃಷ್ಣ ಮಠದ ಕನಕನ ಕಿಂಡಿಗೆ ಸ್ವರ್ಣ ಕವಚ ಅಳವಡಿಕೆ: ಪ್ರಧಾನಿ ಮೋದಿ ಉದ್ಘಾಟನೆ

ಉಡುಪಿ:ಉಡುಪಿ ಶ್ರೀಕೃಷ್ಣ ಮಠದ ಪ್ರಸಿದ್ಧ ಕನಕನ ಕಿಂಡಿಗೆ ಹೊಸದಾಗಿ ತಯಾರಿಸಲಾದ ಸ್ವರ್ಣ ಕವಚವನ್ನು ಅಳವಡಿಕೆ ಮಾಡಲಾಗುತ್ತಿದೆ. ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಪ್ರಮೋದ್ ಮಧ್ವರಾಜ್ ಅವರು ಈ ಬಂಗಾರದ ಕವಚವನ್ನು ಸೇವಾ ರೂಪದಲ್ಲಿ ದೇಣಿಗೆಯಾಗಿ ನೀಡಿದ್ದಾರೆ.

ಸ್ವರ್ಣ ಕವಚವನ್ನು ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರದಲ್ಲಿ ವಿಶೇಷವಾಗಿ ತಯಾರಿಸಲಾಗಿದ್ದು, ಅದು ಪೂರ್ಣಗೊಂಡ ಬಳಿಕ ಪ್ರಮೋದ್ ಮಧ್ವರಾಜ್ ಅವರ ಮನೆಗೆ ಕರೆತರಲಾಯಿತು. ಬಳಿಕ ಗೋಶಾಲೆಯಲ್ಲಿ ಕುರುಬ ಸಮುದಾಯ ಮತ್ತು ಹಾಲುಮತ ಪಂಗಡದವರ ಸಮ್ಮುಖದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ನವೆಂಬರ್‌ 28ರಂದು ಕನಕನ ಕಿಂಡಿಗೆ ಅಳವಡಿಸಲಿರುವ ಈ ಬಂಗಾರದ ಕವಚವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles