ಉಡುಪಿ : ಭಾವೀ ಪರ್ಯಾಯ ಪೀಠಾಧೀಶರಾದ ಶೀರೂರು ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯ ಪೂರ್ವಭಾಗಿಯಾಗಿ ವಿದ್ಯಾಪೀಠದಲ್ಲಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ವಿದ್ಯಾಪೀಠದಲ್ಲಿ ಸ್ವಾಗತಿಸಿದರು.

ಪೇಜಾವರ ಮಠದ ವತಿಯಿಂದ ಶೀರೂರು ಶ್ರೀಗಳಿಗೆ ಔತಣ ಏರ್ಪಡಿಸಲಾಯಿತು. ಶ್ರೀ ಗಳ ಉದ್ದಿಶ್ಯ ಚಕ್ರಾಬ್ಜ ಮಂಡಲ ಪೂಜೆ ನಡೆಯಿತು.

ಪೇಜಾವರ ಮಠದ ವತಿಯಿಂದ ಶೀರೂರು ಶ್ರೀಗಳಿಗೆ ಮಾಲಿಕೆ ಮಂಗಳಾರತಿ ಮಾಡಿ ಶ್ರೀಗಳಿಗೆ ಸಕಲ ಗೌರವವನ್ನು ನೀಡಲಾಯಿತು.
