ಕೋಟ: ಶ್ರೀ ನಂದಿಕೇಶ್ವರ ಪ್ರಸಾದಿತಾ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಇವರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ವಿಶೇಷ ಯಕ್ಷಗಾನ ಪ್ರದರ್ಶನ ಕುಂದಾಪುರದ ರೋಟರಿ ಲಕ್ಷ್ಮೀ ಕಲಾ ಮಂದಿರ ಜೂನಿಯರ್ ಕಾಲೇಜು ಇಲ್ಲಿ ನಡೆಯಿತು.

ವಿಶೇಷ ಯಕ್ಷಗಾನ ಪ್ರದರ್ಶನ ವನ್ನು ಉದ್ಯಮಿ ದತ್ತಾನಂದ ಗಂಗೊಳ್ಳಿ ಇವರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ರವಿರಾಜ್ ಶೆಟ್ಟಿ ವಹಿಸಿದರು, ಮುಖ್ಯ ಅತಿಥಿಯಾಗಿ ಜೆಸಿಐ ಕುಂದಾಪುರ ಸಿಟಿ ಯಾ ಸ್ಥಾಪಕ ಅಧ್ಯಕ್ಷರು ಸಮಾಜ ಸೇವಕರಾದ ಹುಸೇನ್ ಹೈಕಾಡಿ, ಮಹಾಬಲ ಹೇರಿಕುದ್ರು, ವೆಂಕಟೇಶ್ ಪೈ ಸುಧಾಕರ್ ಆಚಾರ್ ಕಂಡ್ಲೂರ್ ಇನ್ನಿತರರು ಉಪಸ್ಥಿತರಿದ್ದರು.

ಶ್ರೀ ನಂದಿಕೇಶ್ವರ ಪ್ರಸಾದಿತಾ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಇದರ ವ್ಯವಸ್ಥಾಪಕರಾದ ರಂಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


