ಉಡುಪಿ : ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೖಸೂರು ದಸರ ಮತ್ತು ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶನ ಕೊಡಲು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಿರ್ತಿಯ ಅಂಕದಮನೆ ಜಾನಪದ ಕಲಾ ತಂಡ ಆಯ್ಕೆ ಆಗಿದೆ.

ಸುಮಾರು ಹದಿನೈದು ಜನರನ್ನೊಳಗೊಂಡ ಕರಾವಳಿ ಜಿಲ್ಲೆಯ ಜಾನಪದ ಪ್ರಕಾರಗಳಲ್ಲಿ ಒಂದಾದ ” ಕಂಗೀಲು ನ್ರತ್ಯ ” ವನ್ನು ಜಂಬೂಸವಾರಿ ಮೆರವಣಿಗೆಯಲ್ಲಿ ಹಲವಾರು ಜಿಲ್ಲಾ ಮತ್ತು ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ ಅಂಕದಮನೆ ತೆಂಕು ಬಿರ್ತಿ ಬ್ರಹ್ಮಾವರ ತಂಡ ಪ್ರಸ್ತುತ ಪಡಿಸಲಿದೆ.
