Wednesday, March 4, 2026

spot_img

ವಂದೇ ಮಾತರಂ ಗೀತೆ ದೇಶಭಕ್ತಿ, ತ್ಯಾಗ ಮತ್ತು ಸಮರ್ಪಣೆಯ ಸಂಕೇತ: ಶಾಸಕ ಎ. ಕಿರಣ್ ಕೊಡ್ಗಿ

ಉಡುಪಿ : ವಂದೇ ಮಾತರಂ ಗೀತೆ ಕೇವಲ ಮಾತೃಭೂಮಿಯನ್ನು ಹೊಗಳಲು ಮಾತ್ರವಲ್ಲದೆ ರಾಷ್ಟ್ರದ ಬಗ್ಗೆ ಗೌರವ, ತ್ಯಾಗ ಮತ್ತು ಸಮರ್ಪಣೆಯ ಭಾವನೆಗಳನ್ನು ಒಳಗೊಂಡಿದೆ. ಯುವ ಪೀಳಿಗೆಗೆ ಈ ಗೀತೆಯ ಪ್ರೇರಣೆ ತಿಳಿಸುವುದು ಅಗತ್ಯವಾಗಿದ್ದು, ಅದರ ಮೂಲಕ ದೇಶನಿಷ್ಠೆ, ಸಂಸ್ಕೃತಿ ಮೌಲ್ಯಗಳು ಮತ್ತು ಕರ್ತವ್ಯ ಭಾವನೆ ಬಲಪಡಿಸುತ್ತದೆ ಎಂದು ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

 ಅವರು ಕುಂದಾಪುರ ಬಿಜೆಪಿ ಕಚೇರಿ ಆವರಣದಲ್ಲಿ ನಡೆದ ವಂದೇ ಮಾತರಂ ಗೀತೆಯ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕ್ಷೇತ್ರಾಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್ ಸೇರಿದಂತೆ ಮಂಡಲದ ವಿವಿಧ ಮೋರ್ಚಾ ಘಟಕಗಳ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಭಾಗವಹಿಸಿದರು.

ನಿಕಟ ಪೂರ್ವ ಪಕ್ಷಾಧ್ಯಕ್ಷ ಶಂಕರ್ ಅಂಕದಕಟ್ಟೆ ಅವರ ನೇತೃತ್ವದಲ್ಲಿ ಕಾರ್ಯಕರ್ತರು ಒಂದೇ ಸ್ವರದಲ್ಲಿ ದೇಶಭಕ್ತಿಯ ಜ್ವಾಲೆ ಹೊತ್ತಿಸುವ ವಂದೇ ಮಾತರಂ ಗೀತೆಯನ್ನು ಸಾಮೂಹಿಕವಾಗಿ ಗಾಯನ ಮಾಡಿದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles