Thursday, March 5, 2026

spot_img

ಲಾಡ್ಜ್‌ ಕಟ್ಟಡದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ: 11 ಜನ ಆರೋಪಿಗಳ ಬಂಧನ

ಬ್ರಹ್ಮಾವರ:  ಹೇರಾಡಿ ಗ್ರಾಮದ ರಶ್ಮಿ ಬಾರ್‌ ಅಂಡ್ ಲಾಡ್ಜ್‌ ಕಟ್ಟಡದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ  ಆಡುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಹನ್ನೊಂದು ಮಂದಿಯನ್ನು ಬಂಧಿಸಿದ್ದಾರೆ. ವಿಶ್ವನಾಥ ಪೂಜಾರಿ ಭಟ್ಕಳ(43), ಗಣೇಶ್ ಪೂಜಾರಿ(30), ಕೇಶವ(57), ಪ್ರಭಾಕರ ಶೆಟ್ಟಿ(49), ಜಯರಾಜ್‌(40), ರಾಜು ಪೂಜಾರಿ(59), ರಾಜೀವ್‌ ಶೆಟ್ಟಿ(49),  ರತ್ನಾಕರ(53), ಪ್ರಶಾಂತ್‌(38), ಹರೀಶ್ ಮೋಗವೀರ(40) ಮತ್ತು ಲೋಹಿತ್ ಕುಪ್ಪಸ್ವಾಮಿ ಭೋವಿ(38) ಬಂಧಿತ ಆರೋಪಿಗಳು.

ಹೇರಾಡಿ ಗ್ರಾಮದ ರಶ್ಮಿ ಬಾರ್‌ &  ಲಾಡ್ಜ್‌ ಕಟ್ಟಡದ ‌2ನೇ ಮಹಡಿಯ ರೂಮ್‌ ನಂಬ್ರ 203 ರಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಮೇರೆಗೆ ಧಾಳಿ ಮಾಡಿದಾಗ, ಆರೋಪಿಗಳು ಹಣವನ್ನು ಪಣವಾಗಿಟ್ಟು ಜುಗಾರಿ ಆಡುತ್ತಿರುವುದು ಕಂಡುಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದು 21080 ರೂಪಾಯಿ ನಗದು ಮತ್ತು ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles