ಉಡುಪಿ : ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಚೈತ್ರಾ ಇವಳಿಗೆ ಬೈಂದೂರು ತಾಲೂಕಿನ ತೆಗ್ಗರ್ಸೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕರಾದ ಜಪಾನ್‌ನ ಹರಿಕೃಷ್ಣ ಭಟ್ ಅವರು ತಮ್ಮ ತಂದೆ-ತಾಯಂದಿರಾದ ವಾಸುದೇವ ಭಟ್ ಮತ್ತು ರುಕ್ಮಿಣಿ ಭಟ್ ಇವರ ಸವಿನೆನಪಿನಲ್ಲಿ, 6 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ‘ರುಕ್ಮಿಣೀವಾಸುದೇವ’ ವನ್ನು ನಿಟ್ಟೆ ವಿಶ್ವವಿದ್ಯಾಲಯದ ನಿರ್ದೇಶಕ ಹರಿಕೃಷ್ಣ ಭಟ್ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಶ್ರೀಮತಿ ಯುಸಾಕೊ ಕನ್ನಡದಲ್ಲೇ ಶುಭ ಕೋರಿದರು. ಅಭ್ಯಾಗತರಾದ ಎ. ರಘುಪತಿ ಭಟ್, ಸಾಂದೀಪನಿ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕರಾದ ವಿಶ್ವೇಶ್ವರ ಅಡಿಗ, ಉಡುಪಿ ಭಾರತೀಶ ಜ್ಯುವೆಲ್ಲರ್ಸ್ನ ಮಾಲಿಕ ಶಶಿಧರ ಭಟ್ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷರಾದ ಎಸ್. ವಿ. ಭಟ್, ಪಿ. ಕಿಶನ್ ಹೆಗ್ಡೆ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ಯು. ಎಸ್. ರಾಜಗೋಪಾಲ ಆಚಾರ್ಯ, ಅನಂತರಾಜ ಉಪಾಧ್ಯ, ಜಯರಾಮ ಪಡಿಯಾರ್, ಬೈಂದೂರು ಶಾಸಕರ ಆಪ್ತಕಾರ್ಯದರ್ಶಿ ಶೋಧನ ಕುಮಾರ್ ಉಪಸ್ಥಿತರಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.



