ಉಡುಪಿ : ಉಡುಪಿಯ ಪ್ರಸಿದ್ಧ ಮಲ್ಪೆ ಕಡಲತೀರದ ಸೀವಾಕ್ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ಅಚ್ಚರಿಯ ಘಟನೆಯೊಂದು ನಡೆದಿದೆ. ಬೃಹತ್ ಅಲೆಗಳು ಏಕಾಏಕಿ ದಡಕ್ಕಪ್ಪಳಿಸಿ, ಅದರೊಂದಿಗೆ ಲಕ್ಷಾಂತರ ಬಂಗುಡೆ ಮತ್ತು ಭೂತಾಯಿ ಮೀನುಗಳು ತೀರಕ್ಕೆ ಅಪ್ಪಳಿಸಿವೆ.

ಈ ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡ ಸ್ಥಳೀಯರು ಮತ್ತು ಮೀನುಗಾರರು ಅಚ್ಚರಿ ಚಕಿತರಾದರು. ಸಮುದ್ರತೀರವು ಕೆಲವೇ ಕ್ಷಣಗಳಲ್ಲಿ ಮೀನುಗಳ ಸುಗ್ಗಿಯಿಂದ ತುಂಬಿ ಹೋಗಿದ್ದು, ಸ್ಥಳೀಯರು ತಮ್ಮ ಕೈಲಾದ ಮಟ್ಟಿಗೆ ಮೀನುಗಳನ್ನು ಸಂಗ್ರಹಿಸಿದರು.

ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ, ಇದು ಪ್ರಕೃತಿಯ ಅದ್ಭುತ ದೃಶ್ಯವೆಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಹವಾಮಾನ ತಜ್ಞರ ಪ್ರಾಥಮಿಕ ಅಂದಾಜು ಪ್ರಕಾರ, ಸಮುದ್ರದ ಅಲೆಯ ಒತ್ತಡ ಬದಲಾವಣೆ ಹಾಗೂ ನೀರಿನ ತಾಪಮಾನ ವ್ಯತ್ಯಾಸದಿಂದ ಮೀನುಗಳು ದಡದತ್ತ ತೇಲಿಬಂದಿರುವ ಸಾಧ್ಯತೆ ಇದೆ ಎನ್ನಲಾಗಿದೆ.



