ಉಡುಪಿ: ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ ಎಫ್ ಐ) ರಾಜ್ಯ ಮಟ್ಟದ ಶೈಕ್ಷಣಿಕ ಜಾಥವು ರಾಜ್ಯದಾದ್ಯಂತ ಸುತ್ತಾಟ ನಡೆಸಿ ಮಂಗಳವಾರ ಮಧ್ಯಾಹ್ನ ಉಡುಪಿಗೆ ಆಗಮಿಸಿದೆ. ಈ ಸಂದರ್ಭದಲ್ಲಿ ಉಡುಪಿ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಭವ್ಯ ಸ್ವಾಗತ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಜಾಥವನ್ನು ಸ್ವಾಗತಿಸಿದ ನಂತರ ನಡೆದ ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರಾದ ಸುಂದರ್ ಮಾಸ್ಟರ್ ಹಾಗೂ ಪ್ರಗತಿಪರ ಚಿಂತಕರಾದ ಫ್ರೋಫಣಿರಾಜ್ ಅವರು ವಿದ್ಯಾರ್ಥಿಗಳಿಗೆ ಉದ್ದೇಶಿಸಿ ಮಾತನಾಡಿ, ಶಿಕ್ಷಣದ ಹಕ್ಕು, ಸಾಮಾಜಿಕ ನ್ಯಾಯ ಮತ್ತು ಯುವ ಶಕ್ತಿಯ ಪ್ರಾಮುಖ್ಯತೆಯನ್ನು ವಿವರಿಸಿದರು.

ಜಾಥದ ತಂಡದಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯ ಅಧ್ಯಕ್ಷ ಶಿವಪ್ಪ, ರಾಜ್ಯ ಕಾರ್ಯದರ್ಶಿ ವಿಜಯ, ರಾಜ್ಯ ಸಮಿತಿ ಸದಸ್ಯರಾದ ಅರ್ಪಿತ್, ಮಣಿಭಾರತಿ, ವನಿತ್ ಸೇರಿದಂತೆ ಹಲವು ಕಾರ್ಯಕರ್ತರು ಭಾಗಿಯಾಗಿದ್ದರು. ಉಡುಪಿ ತಾಲೂಕು ಎಸ್ ಎಫ್ ಐ ಕಾರ್ಯದರ್ಶಿ ಕಾರ್ತಿಕ್, ಡಿವೈ ಎಫ್ ಐ ಮಾಜಿ ಮುಖಂಡರಾದ ಸುರೇಶ್ ಕಲ್ಲಾಗಾರ್, ಕಾರ್ಮಿಕ ಮುಖಂಡರು ಉಮೇಶ್ ಕುಂದರ್, ಶಶಿಧರ ಗೊಲ್ಲ, ನಳಿನಿ ಎಸ್, ರಂಗನಾಥ, ಮತ್ತು ಕ್ರಾಂತಿಕಾರಿ ಮಹಿಳಾ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷೆ ಸರೋಜ ಎಸ್ ಉಪಸ್ಥಿತರಿದ್ದರು.

ಎಸ್ ಎಫ್ ಐ ಉಡುಪಿ ಜಿಲ್ಲಾ ಮಾಜಿ ಕಾರ್ಯದರ್ಶಿ ಕವಿರಾಜ್ ಎಸ್. ಕಾಂಚನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಎಸ್ ಎಫ್ ಐ ರಾಜ್ಯ ಸಮಿತಿ ಸದಸ್ಯೆ ಕ್ರತಿಕಾ ವಂದಿಸಿದರು.



