ಉಡುಪಿ: ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಮಟ್ಟದ ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ಮತ್ತು ಬಿ.ಎಸ್.ಎನ್.ಎಲ್ ನಾಮ ನಿರ್ದೇಶಿತ ಸದಸ್ಯರೊಂದಿಗೆ ನೆಟ್ವರ್ಕ್ ಸಮಸ್ಯೆಯ ಬಗ್ಗೆ, ಟವರ್ ಬ್ಯಾಟರಿ ಜನರೇಟರ್ ಮತ್ತು ನೆಟ್ವರ್ಕ್ ಸಮಸ್ಯೆಯ ಅಡಚನೆಯನ್ನು ಸರಿಪಡಿಸಿ, ಬಿ.ಎಸ್.ಎನ್.ಎಲ್ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಎಲ್ಲಾ ಒಟ್ಟಾಗಿ ಕೆಲಸ ಮಾಡಬೇಕೆಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರಿನಿವಾಸ ಪೂಜಾರಿ ಸಭೆಯಲ್ಲಿ ಹೇಳಿದರು.

ಜಿಲ್ಲಾ ಮಟ್ಟದ ಬಿ.ಎಸ್.ಎನ್.ಎಲ್ ಅಧಿಕಾರಿಗಳಿಗೆ ಸಲಹೆ ನೀಡಿದರು. ಹೆಬ್ರಿ ತಾಲ್ಲೂಕಿನ, ನಾಡ್ಪಾಲು ಸೇರಿದಂತೆ ಉಳಿದೆಡೆ ಟವರ್ನ ನೆಟ್ವರ್ಕ್ ಸಮಸ್ಯೆಯಿಂದಾಗಿ ಗ್ರಾಹಕರಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಸರಿಪಡಿಸಬೇಕೆಂದು ಕೇಂದ್ರ ಸರ್ಕಾರದ ನಾಮ ನಿರ್ದೇಶಿತ ಸದಸ್ಯರಾದ ಶ್ರೀಮತಿ ಜ್ಯೋತಿ ಹರೀಶ್ ಸಭೆಗೆ ತಿಳಿಸಿದರು. ಅಲ್ಲದೇ, ಕಟಪಾಡಿ, ಅಂಬಲಪಾಡಿ, ಬೈಂದೂರಿನ ಕೆಲವೆಡೆ ಬಿ.ಎಸ್.ಎನ್.ಎಲ್ ಸೇವೆಯಲ್ಲಿ ವ್ಯತ್ಯಯವಾಗುವ ಬಗ್ಗೆ ನಾಮನಿರ್ದೇಶಿತ ಸದಸ್ಯರು ಸಭೆಯ ಗಮನ ಸೆಳೆದರು.

ಸಭೆಯಲ್ಲಿ ಈ ತಿಂಗಳ 25 ರಿಂದ 30 ರ ದಿನಾಂಕದೊಳಗಡೆ ರಾಜ್ಯ ಮಟ್ಟದ ಅಧಿಕಾರಿಗಳ ಜೊತೆ ಶಿವಮೊಗ್ಗ ಸಂಸದರ ಜೊತೆ ಇನ್ನೊಂದು ಸುತ್ತಿನ ಸಭೆಯನ್ನು ನಡೆಸುವುದಾಗಿ ಸಂಸದ ಕೋಟ ಸಭೆಗೆ ತಿಳಿಸಿ, ಅಧಿಕಾರಿಗಳೊಂದಿಗೆ ಸೂಕ್ತ ನಿರ್ದೇಶನ ನೀಡಿದರು, ಸಭೆಯಲ್ಲಿ ನಾಮ ನಿರ್ದೇಶಿತ ಸದಸ್ಯರಾದ ಕೀರ್ತೀಶ್ ಪೂಜಾರಿ, ಕೋಟ, ಪ್ರದೀಪ್ ಕೊಠಾರಿ, ಹಳ್ಳಿಹೊಳೆ, ನಿತಿನ್ ಸಾಲಿಯಾನ್ ನಿಟ್ಟೆ, ಶೈಲೇಂದ್ರ ಶೆಟ್ಟಿ ಮಣಿಪಾಲ, ಚಂದ್ರ ಕಂಡ್ಲೂರು, ಜಿಲ್ಲಾ ಮಟ್ಟದ ಬಿ.ಎಸ್.ಎನ್.ಎಲ್ ಜೆ.ಟಿ.ಓ ಹಾಗೂ ತಾಲ್ಲೂಕು ಮಟ್ಟದ ಎ.ಜಿ.ಎಮ್ಗಳು ಹಾಜರಿದ್ದರು.