ಉಡುಪಿ : ಮಹಿಳೆಯನ್ನು ಅಕ್ರಮವಾಗಿ ಇರಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸ್ಥಳಕ್ಕೆ ಪೊಲೀಸ್ ರು ಧಾಳಿ ಮಾಡಿ ಮಹಿಳೆಯನ್ನು ರಕ್ಷಿಸಿ ಆರೋಪಿಯನ್ನು ಬಂಧಿಸಿದ ಘಟನೆ ಈಶ್ವರ ನಗರದಲ್ಲಿ ನಡೆದಿದೆ. ಹೊನ್ನಾವರ ತಾಲೂಕು ಜಳವಳ್ಳಿ ಗ್ರಾಮ ಹೊಳೆಬದಿ ಕೇರಿ ನಿವಾಸಿ ಗಣೇಶ್ ಗಣಪ ನಾಯ್ಕ್ (38) ಬಂಧಿತ ಆರೋಪಿ. ಹೆರ್ಗ ಗ್ರಾಮದ ಈಶ್ವರನಗರ 20 ನೇ ಕ್ರಾಸ್ ನ ಬಳಿ ಇರುವ ಮಾಲಸಾ ಎಮರಾಲ್ಡ್ ಅಪಾರ್ಟ್ಮೆಂಟ್ ನ ಮೊದಲನೇ ಮಹಡಿಯಲ್ಲಿನ ರೂಮ್ ನಂಬ್ರ: 103 ಮನೆಯಲ್ಲಿ ಮಹಿಳೆಯನ್ನು ಅಕ್ರಮ ಲಾಭಕ್ಕಾಗಿ ಬಲವಂತವಾಗಿ ಇರಿಸಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸ್ ರು ಧಾಳಿ ನಡೆಸಿದ್ದಾರೆ. ಈ ಒರ್ವ ಆರೋಪಿ ಗಣೇಶ್ ಸಿಕ್ಕಿ ಬಿದ್ದಿದು ಇನ್ನೋರ್ವ ಪರಾರಿಯಾಗಿದ್ದಾನೆ, ನೊಂದ ಮಹಿಳೆಯನ್ನು ರಕ್ಷಿಸಲಾಗಿದೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


