Tuesday, March 3, 2026

spot_img

ಪ್ರಧಾನಿ ಭೇಟಿ ಹಿನ್ನೆಲೆ, ದುರಸ್ಥಿ ಕಾರ್ಯ ತಾತ್ಕಾಲಿಕ ನಿಲ್ಲಿಸಲು ಡಿಸಿ ಆದೇಶ

ಉಡುಪಿ : ಭಾರತದ ಪ್ರಧಾನ ಮಂತ್ರಿಯವರು ನವೆಂಬರ್ 28 ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿರುವ ಸಂದರ್ಭದಲ್ಲಿ ನಿಯಮಾನುಸಾರ ಶಿಷ್ಟಾಚಾರವನ್ನು ಪಾಲಿಸಬೇಕಾಗಿರುವ ಹಿನ್ನೆಲೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ಸೆಕ್ಷನ್ 163 ರನ್ವಯ ದುರಸ್ಥಿ ಕಾರ್ಯ ತಾತ್ಕಾಲಿಕ ನಿಲ್ಲಿಸಲು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಆದೇಶ ಹೊರಡಿಸಿರುತ್ತಾರೆ.

  ಉಡುಪಿ ನಗರ ವ್ಯಾಪ್ತಿಯೊಳಗಿನ ಎನ್.ಹೆಚ್-66 ಮತ್ತು ಸಂಪರ್ಕ ರಸ್ತೆಗಳ ಮೇಲೆ ನಡೆಯುತ್ತಿರುವ ಎಲ್ಲಾ ಭೂಮಿ ಅಗೆಯುವ, ಕೊರೆಯುವ, ತೋಡುವ ಹಾಗೂ ಗುಂಡಿ ತೋಡುವ ಕೆಲಸಗಳನ್ನು ತಕ್ಷಣವೇ ನಿಲ್ಲಿಸಬೇಕು. ಈ ನಿರ್ಬಂಧ ಆದೇಶವು ನ. 28 ರ ಸಂಜೆ 5 ರ ವರೆಗೆ ಜಾರಿಯಲ್ಲಿರುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವಹಿಸಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

  ಈ ಆದೇಶವನ್ನು ಎನ್.ಹೆಚ್ ವಿಭಾಗೀಯ ಅಧಿಕಾರಿಗಳು, ಪಿ.ಡಬ್ಲ್ಯೂ.ಡಿ, ಪಿ.ಆರ್.ಇ.ಡಿ, ನಗರಸಭೆ, ಬಿ.ಎಸ್.ಎನ್.ಎಲ್ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles