ಕುಂದಾಪುರ : ಕುಂದಾಪುರ ಕಸಬಾ ಗ್ರಾಮದ ಫೆರಿರಸ್ತೆಯ ಪಂಚಗಂಗಾವಳಿ ಹೊಳೆಯ ಬಳಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರನ್ನು ಕುಂದಾಪುರ ಪೊಲೀಸ್ ರು ವಶಕ್ಕೆ ಪಡೆದಿದ್ದಾರೆ. 1) ಅಣ್ಣಯ್ಯ ಖಾರ್ವಿ(62), ಸುರೇಶ ನಾಯ್ಕ(71), ದಯಾನಂದ(55), ಉಬೇದುಲ್ಲಾ(50) ಬಂಧಿತರು.

ಸಾರ್ವಜನಿಕ ಸ್ಥಳವಾದ ಕಸಬಾ ಗ್ರಾಮದ ಫೆರಿರಸ್ತೆಯ ಪಂಚಗಂಗಾವಳಿ ಹೊಳೆಯ ಬದಿಯಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದಾರೆ ಎನ್ನುವ ದೂರಿನ ಆಧಾರ ಮೇರೆ ಧಾಳಿ ಮಾಡಿದಾಗ ಆರೋಪಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಕುಂದಾಪುರ ಪೊಲೀಸ್ರು ಆರೋಪಿಗಳನ್ನು ಬಂಧಿಸಿ, ಆಟಕ್ಕೆ ಬಳಸಲಾದ ವಸ್ತು, ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.