ಉಡುಪಿ : ಉಡುಪಿಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಪಕ್ಷದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು, ಲಕ್ಷಾಂತರ ಮತಗಳಿಂದ ಆಯ್ಕೆಯಾದ ಉಡುಪಿ ಶಾಸಕರನ್ನು ಏಕವಚನದಲ್ಲಿ ಮಾತನಾಡಿ, ಶಾಸಕರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಹೇಳಿದ ಕಾಂಗ್ರೆಸ್ ನ ಪ್ರಸಾದ್ ಕಾಂಚನ್ ಹೇಳಿಕೆಗೆ ಉಡುಪಿ ಜಿಲ್ಲಾ ಶ್ರೀರಾಮಸೇನೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ.
ನಿಮಗೆ ತಾಕತ್ ಇದ್ದರೆ ಉಡುಪಿ ಶಾಸಕರ ಕಚೇರಿಗೆ ಮುತ್ತಿಗೆ ಹಾಕಿ!, ಅದರ ಮೊದಲು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಾಜಕಾಲುವೆಯನ್ನು ಒತ್ತುವರಿ ಮಾಡಿ ತನ್ನ ಶೋರೂಮ್ ಮಾಡಿದ ನಿಮ್ಮ ಕಚೇರಿಗೆ ಶ್ರೀರಾಮಸೇನೆಯು ಮುತ್ತಿಗೆ ಹಾಕಲಿದೆ ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗ ಕಾರ್ಯಧ್ಯಕ್ಷ ಜಯರಾಂ ಅಂಬೆಕಲ್ಲು ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜಕೀಯ ಪಕ್ಷದಲ್ಲಿ ಪರ – ವಿರೋಧ ಚರ್ಚೆಗಳು ಬರುವುದು ಸಹಜ, ಆದರೆ ರಾಜಕೀಯ ಮುತ್ಸದಿ ತನ್ನ ತಾಯಿಯಿಂದಲೇ ರಾಜಕೀಯ ಕಲಿಯದ ಪ್ರಸಾದ್, ಧಾರ್ಮಿಕ ಭಾವನೆಗಳಂತೆ ನಡೆಯುವ ಕೋಳಿ ಅಂಕವನ್ನು ಉಡುಪಿ ಜಿಲ್ಲೆಯಲ್ಲಿ ನಿರ್ಭಂದಿಸಿದಾಗ, ಉಡುಪಿ ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದು ತಪ್ಪೇ?. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದಾಗ ಉಡುಪಿ ಶಾಸಕರು ಸದಾ ಮುಂದೆ ಇರುತ್ತಾರೆ ಎಂದು ಅಘೋಷಿತ ನಾಯಕ ಪ್ರಸಾದ್ ಅರಿತುಕೊಳ್ಳಲಿ.
ರಾಜಕಾಲುವೆಯಲ್ಲಿ ನಿರ್ಮಿಸಿದ ತನ್ನ ಉದ್ಯಮವನ್ನು ತೆರವುಗೊಳಿಸಿ, ನಂತರ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲಿ ಎಂದು ಶ್ರೀರಾಮಸೇನೆಯ ಮಂಗಳೂರು ವಿಭಾಗ ಕಾರ್ಯಧ್ಯಕ್ಷ ಜಯರಾಂ ಅಂಬೆಕಲ್ಲು ಹಾಗೂ ಉಡುಪಿ ಜಿಲ್ಲಾಧ್ಯಕ್ಷ ಶರತ್ ಪೂಜಾರಿ ಪ್ರಸಾದ್ ಗೆ ನೇರ ಸವಾಲು ಹಾಕಿದ್ದಾರೆ