ಉಡುಪಿ : ನಗರದ ಹೊರವಲಯದಲ್ಲಿ ಕಾಲುಗಳೆರಡು ಗಾಯಗಳಿಂದ ಉಲ್ಬಣಗೊಂಡು ದುರ್ವಾಸನೆಯಿಂದ ನರಳುತ್ತಿದ್ದ ಏಕಾಂಗಿಯಾಗಿ ಬದುಕಲು ಅಸಾಧ್ಯವೆನಿಸಿ ನದಿಗೆ ಹಾರಲು ಯತ್ನಿಸಿದ ವೃದ್ಧರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ವೃದ್ಧರು ವಾಸು ಭಟ್(ರಾವ್)( 75) ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಗಾಯ ಉಲ್ಬಣಗೊಂಡು ಅಸಹಾಯಕರಾದವರು. ರಕ್ಷಣಾ ಸಮಯ ತನಗೆ ಮದುವೆಯಾಗಿಲ್ಲ ಯಾರಿಗೂ ತೊಂದರೆ ಆಗೋದು ಬೇಡ ಹಾಗೂ ಒಂಟಿಯಾಗಿ ಬದುಕಲು ಅಸಾಧ್ಯವಾಗಿ ನದಿಗೆ ಹಾರುವ ನನ್ನನ್ನು ತಡೆಯಬೇಡಿ ಎಂದು ಮರುಗುವುದರ ಜೊತೆಗೆ ಸಂಜೆ 4 ಗಂಟೆಗೆ ನನಗೆ ಸಾಯುವುದಕ್ಕೆ ತಿಥಿ ಮತ್ತು ನಕ್ಷತ್ರ ಕೂಡಾ ಜೋಡಣೆಯಾಗುವುದು ಎಂದು ಕಣ್ಣೀರು ಸುರಿಸಿ ದುಃಖಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಹೋಮ್ ಡಾಕ್ಟರ್ ಫೌಂಡೇಶನ್ ನ ಡಾ. ಶಶಿಕಿರಣ್ ಶೆಟ್ಟಿ ನೆರವಾದರು. ಸಂಬಂಧಿಕರು ಅಥವಾ ಸ್ಪಂದಿಸುವವರು ಜಿಲ್ಲಾಸ್ಪತ್ರೆ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ.