ಉಡುಪಿ : ಕರಾವಳಿಯ ಹೆಮ್ಮೆಯ ದೈವ ನರ್ತಕ ರಾದ ಶ್ರೀ ಕೃಷ್ಣ ಗುಜರನ್ (80)ರವರು ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಿಗ್ಗೆ ಕುತ್ಪಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ದೈವ ನರ್ತಕರಾಗಿ ಕರಾವಳಿಯಲ್ಲಿ ಈಗಾಗಲೇ ತನ್ನದೇ ಆದ ಖ್ಯಾತಿ ಪಡೆದಿರುವ ಮಹೇಶ್ ಗಜರನ್ ಹಾಗೂ ಮನೋಹರ್ ಮತ್ತು ಇಬ್ಬರು ಹೆಣ್ಣು ಮಕ್ಕಳು, ಬಂದು ಬಾಂಧವರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಲವಾರು ಗರೋಡಿ, ಸಂಘ ಸಂಸ್ಥೆಗಳು ಆರಾಧನಾ ಕಲೆಯಲ್ಲಿ ಇವರ ಸೇವೆಯನ್ನು ಗೌರವಿಸಿ ಸನ್ಮಾನಿಸಿದ್ದರು.

ಭಾನುವಾರ ಮಧ್ಯಾಹ್ನ 12:30 ಕ್ಕೆ ಸರಿಯಾಗಿ ಮೃತರ ಅಂತಿಮ ವಿಧಿ ವಿಧಾನಗಳು ಅವರ ಮನೆಯಲ್ಲಿ ಜರುಗಲಿದೆ ಎಂದು ಅವರ ಪುತ್ರ ತಿಳಿಸಿದ್ದಾರೆ. ಸದಾ ಶ್ವೇತ ವಸ್ತ್ರದಾರಿಯಾಗಿ ಸರಳ ಸಜ್ಜನಿಕೆಯ ಹಲವಾರು ವರ್ಷಗಳ ಕಾಲ ದೈವ, ದೇವರು ಗಳ ಸೇವೆ ಮಾಡಿ ಸಾರ್ಥಕ ಜೀವನ ನಡೆಸಿ ಇತರರಿಗೆ ಮಾದರಿಯಾಗಿ ಜೀವಿಸಿದ್ದರು.


