ಉಡುಪಿ : ಮಣಿಪಾಲದ ಪ್ರತಿಷ್ಠಿತ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ತರಗತಿಗೆ ನುಗ್ಗಿ ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ ಮೂವರು ವಿದ್ಯಾರ್ಥಿಗಳ ಮೇಲೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಜ್ ವೀರ್ ಸಿಂಗ್, ವಿಕ್ರಮ್ ಸಿಂಗ್ ಹಾಗೂ ಕ್ರಿಶ್ ಎನ್ನುವ ವಿದ್ಯಾರ್ಥಿಗಳು ಸದ್ಯ ಹಲ್ಲೆ ಆರೋಪಿಗಳು.

ಮಣಿಪಾಲದ ಪ್ರತಿಷ್ಠಿತ ಕಾಲೇಜಿನಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ವಿದ್ಯಾಬ್ಯಾಸ ಮಾಡಿಕೊಂಡಿದ್ದ ರಾಜ್ ಗಿರೀಶ್ ಸುವರ್ಣ ಹಾಗೂ ಅವರ ಸ್ನೇಹಿತ ಸಾತ್ವಿಕ್ ಬಂಢಾರಿ ಅವರು ತರಗತಿಯಲ್ಲಿರುವಾಗ ಆರೋಪಿತರುಗಳು, ತರಗತಿಗೆ ನುಗ್ಗಿ ಅವಾಚ್ಯವಾಗಿ ಬೈದು, ಹಲ್ಲೆ ಮಾಡಿದ ಪರಿಣಾಮ ಸ್ವಾತಿಕ್ ಕೆ ಭಂಡಾರಿಯವರ ಎಡ ಕೈಭುಜದ ಮೂಳೆ ಮುರಿತವಾಗಿ, ಗಂಭೀರವಾಗಿ ಗಾಯಗೊಂಡಿದ್ದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿಗಳು ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದ ವೇಳೆ ಮಣಿಪಾಲ ಪೊಲೀಸ್ ರಿಗೆ ಆರೋಪಿತರುಗಳು ಮಾದಕ ಪದಾರ್ಥವನ್ನು ಸೇವನೆ ಮಾಡಿರುವುದು ಧೃಢಪಟ್ಟಿರುತ್ತದೆ. ಆರೋಪಿಗಳನ್ನು ವಶಕ್ಕೆ ಪಡೆದು ಸದ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದು, ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.