ಉಡುಪಿ: ಉಡುಪಿ ಜಿಲ್ಲೆಯಲ್ಲಿ ಇರುವ ಮೂರು ಟೋಲ್ ಗೇಟ್ ಗಳಲ್ಲಿ ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಹಣ ವಸೂಲಿಗೆ ಇಳಿದಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಸ್ಥಳೀಯರಿಗೆ ಟೋಲ್ ವಿನಾಯಿತಿ ನೀಡಬೇಕು ಎನ್ನುವ ಆದೇಶವಿದ್ದರು ಕೂಡ ಟೋಲ್ ಗೇಟ್ ನವರು ಯಾವುದೇ ಟೋಲ್ ನಲ್ಲೂ ಸ್ಥಳೀಯರಿಗೆ ಸರಿಯಾದ ವಿನಾಯಿತಿ ನೀಡುತ್ತಿಲ್ಲ, ಇನ್ನು ನೀಡುತ್ತಿರುವ ವಿನಾಯಿತಿಯನ್ನು ಕಾಣ ಹೇಳಿ ಬಂದ್ ಮಾಡುವ ರೀತಿಯಲ್ಲಿ ಟೋಲ್ ಗೇಟ್ ವ್ಯವಸ್ಥಿತವಾಗಿ ಕಾರ್ಯಚರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕರಾವಳಿಯ ಸಾರಿಗೆ ಉದ್ಯಮಿಗಳು ಒಟ್ಟಾಗಿ ಟೋಲ್ ಗೇಟ್ ಗೆ ಪಾಠ ಕಲಿಸುವ ಕೆಲಸ ಮಾಡಿದ್ದಾರೆ.

ಮುಖ್ಯವಾಗಿ ಉಡುಪಿ ಮತ್ತು ಮಂಗಳೂರು ಜಿಲ್ಲೆಯಲ್ಲಿ ಖಾಸಗಿ ಬಸ್ ಗಳದ್ದೆ ಕಾರುಬಾರು ಎಂದರೆ ತಪ್ಪಾಗಲಾರದು. ಸರಕಾರಿ ಬಸ್ ವ್ಯವಸ್ಥೆ ಇದ್ದರು ಕೂಡ ಸಮಯ ಪಾಲನೆ ಮತ್ತು ಶಿಸ್ತಿ ಉದ್ದೇಶಕ್ಕೆ ಇಲ್ಲಿನ ಜನ ಖಾಸಗಿ ಬಸ್ ಗಳನ್ನೆ ಅವಲಂಬಿಸಿದ್ದಾರೆ. ಇಲ್ಲಿ ಸಂಚರಿಸುವ ಬಹುತೇಕ ಖಾಸಗಿ ಬಸ್ ಗಳು ದಿನಕ್ಕೆ 3-4 ಸಲವಾದರೂ ಟೋಲ್ ಗೇಟ್ ಪಾಸ್ ಆಗಿ ಆಚೆಯಿಂದ ಈಚೆ ಹೋಗುವುದು ಸಾಮಾನ್ಯ. ಈ ಹಿಂದೆ ಖಾಸಗಿ ಬಸ್ ಗಳಿಗೆ ಒಂದಿಷ್ಟು ವಿನಾಯಿತಿಯ ಜೊತೆಗೆ ಅಲ್ಪ ಮೊತ್ತದ ಟೋಲ್ ನೊಂದಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವ್ಯವಸ್ಥೇ ಇತ್ತು. ಆದರೆ ಇತ್ತೀಚೆಗೆ ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಗೇಟ್ ಗುತ್ತಿಗೆ ಬದಲಾವಣೆಯಾದ ಹಿನ್ನಲೆಯಲ್ಲಿ ಹೊಸ ಮ್ಯಾನೆಜಮ್ಮೆಂಟ್ ವ್ಯವಸ್ಥೇ ನೋಡಿಕೊಳ್ಳುತ್ತಿದೆ. ಯಾವಾಗ ಹೊಸ ತಂಡ ಟೋಲ್ ಗೇಟ್ ಗುತ್ತಿಗೆ ಪಡೆಯಿತೋ ಆ ದಿನದಿಂದ ಖಾಸಗಿ ವಾಹನಗಳ ಜೊತೆ ಖಾಸಗಿ ಬಸ್ ಗಳಿಗೂ ಒಂದಲ್ಲ ಒಂದು ಸಮಸ್ಯೆ ತಂದಿಡುತ್ತಿದೆ. ಸುಮಾರು 7,500ರಿಂದ 12,000 ಕೆಜಿ ತೂಕದ ಬಸ್ಸುಗಳು ಟೋಲ್ ಗೇಟ್ಗಳಿಂದ ಫಾಸ್ಟ್ ಟ್ಯಾಗ್ ಬಳಸಿ ತೆರಳುವಾಗ, ಮೊದಲೇ ಟೋಲ್ ಶುಲ್ಕ ಅಕೌಂಟ್ನಿಂದ ಡೆಬಿಟ್ ಆಗುತ್ತಿದ್ದರೂ, ನಂತರದ ದಿನ ಮತ್ತಷ್ಟು ಹೆಚ್ಚುವರಿ ಹಣವನ್ನು ಅಕೌಂಟ್ನಿಂದ ಕಳೆಯಲಾಗುತ್ತಿತ್ತು. ಈ ಅನ್ಯಾಯದ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತಿಲಿಲ್ಲ. ಇದರಿಂದ ಅಸಮಾಧಾನಗೊಂಡ ಕರಾವಳಿ ಬಸ್ ಮಾಲಕರ ಸಂಘವು ಪ್ರತಿಭಟನೆ ನಡೆಸಿದರೂ ಸ್ಪಷ್ಟ ಪರಿಹಾರ ಸಿಕ್ಕಿರಲಿಲ್ಲ. ೀ ಹಿನ್ನಲೆಯಲ್ಲಿ ಕೊನೆಗೆ ಸಂಘವು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿತ್ತು.

2025ರ ಎಪ್ರಿಲ್ 25 ರಂದು ನಡೆದ ವಿಚಾರಣೆಯಲ್ಲಿ, ನ್ಯಾಯಾಲಯವು, ವಾಹನ ಟೋಲ್ ಗೇಟ್ ಪಾಸಾದ ಕ್ಷಣದಲ್ಲಿ ಫಾಸ್ಟ್ ಟ್ಯಾಗ್ ಮುಖಾಂತರ ಟೋಲ್ ಶುಲ್ಕ ಡೆಬಿಟ್ ಆಗಬೇಕು. ಬಳಿಕ ಅಕ್ರಮವಾಗಿ ಹೆಚ್ಚುವರಿ ಹಣ ಕಡಿತಗೊಳಿಸಲು ಅವಕಾಶವಿಲ್ಲ ಎಂಬ ತಾತ್ಕಾಲಿಕ ಆದೇಶವನ್ನು ನೀಡಿದೆ. ಈ ಆದೇಶವು ತಕ್ಷಣದಿಂದಲೇ ಅಳವಡಿಸಲಾಗುತ್ತದೆ ಎನ್ನುವ ಆದೇಶವನ್ನು ನೀಡುವ ಮೂಲಕ ಟೋಲ್ ಗೇಟ್ ಗಳ ಕಳ್ಳಾಟಕ್ಕೆ ಬ್ರೇಕ್ ಹಾಕಿದೆ. ಸದ್ಯ ನ್ಯಾಯಾಲಯ ನೀಡಿದ ಈ ತಾತ್ಕಾಲಿಕ ಪರಿಹಾರದಿಂದ ಕರಾವಳಿಯ ಸಾರಿಗೆ ಉದ್ಯಮಿಗಳು ನಿರಂತರವಾಗಿದ್ದ ಟೋಲ್ ಗೇಟ್ ಅವ್ಯವಸ್ಥೆಯಿಂದ ತಾತ್ಕಾಲಿಕವಾಗಿ ರಕ್ಷಣೆ ಪಡೆದಿದ್ದಾರೆ, ಇನ್ನಾದರೂ ಜಿಲ್ಲೆಯ ಈ ಸಮಸ್ಯೆಗೆ ಪೂರ್ಣ ಪ್ರಮಾಣದ ಮುಕ್ತಿ ನೀಡಬೇಕು ಎನ್ನುವುದು ಕರಾವಳಿರ ಬೇಡಿ ಎಂದು ಅಧ್ಯಕ್ಷರಾದ ಶ್ರೀ ರಾಘವೇಂದ್ರ ಭಟ್ ತಿಳಿಸಿದ್ದಾರೆ.
ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಗೇಟ್ಗಳಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಕರಾವಳಿ ಬಸ್ಸು ಮಾಲಕರ ಸಂಘ, ನ್ಯಾಯಾಂಗದ ಹಾದಿಯನ್ನು ತಲುಪಿದ್ದು, ಹೈಕೋರ್ಟ್ ತಾತ್ಕಾಲಿಕ ಪರಿಹಾರ ನೀಡಿದೆ
ರಾಘವೇಂದ್ರ ಭಟ್ (ಅಧ್ಯಕ್ಷ, ಕರಾವಳಿ ಬಸ್ ಮಾಲಕರ ಸಂಘ)


