ಕುಂದಾಪುರ : ಚಿಲ್ಲರೆ ಇಲ್ಲ ಚಿಲ್ಲರೆ ಕೊಡಿ ಎಂದಿದ್ದಕ್ಕೆ ಏಕಾಏಕಾ ಜಗಳಕ್ಕೆ ಇಳಿದು ಮೆಡಿಕಲ್ ಹುಡುಗಿಗೆ ಹಲ್ಲೆ ನಡೆಸಿದ ಘಟನೆ ಮಾವಿನಕಟ್ಟೆಯಲ್ಲಿ ವರದಿಯಾಗಿದೆ. ಲಕ್ಷ್ಮೀ ಹಲ್ಲೆಗೊಳಗಾದ ಮೆಡಿಕಲ್ ಹುಡುಗಿ, ಗ್ರಾಹಕಿ ಯಾಸ್ಮಿನ್ ಹಲ್ಲೆ ನಡೆಸಿದ ಆರೋಪಿ.

ಮಾವಿನಕಟ್ಟೆಯ ಮೆಡಿಕಲ್ ಶಾಪ್ ಗೆ ಬಂದ ಯಾಸ್ಮಿನ್ ಮೆಡಿಕಲ್ ನಲ್ಲಿ ವಸ್ತುವೊಂದನ್ನು ಕೇಳಿದ್ದಾಳೆ. ಮೆಡಿಕಲ್ ಹುಡುಗಿ ಲಕ್ಷ್ಮೀ, ಯಾಸ್ಮಿನ್ ಹೇಳಿದ ವಸ್ತು ತಂದು ಕೊಟ್ಟ ಬಳಿಕ, ಯಾಸ್ಮಿನ್ 500 ರೂಪಾಯಿ ನೋಟು ನೀಡಿದ್ದಾಳೆ. 500 ರೂಪಾಯಿಗೆ ಚಿಲ್ಲರೆ ಇಲ್ಲ, ಚಿಲ್ಲರೇ ಕೊಡಿ ಅಂದಾಕ್ಷಣ ಏರುಧನಿಯಲ್ಲಿ ಮಹಿಳೆ ಚಿಲ್ಲರೆ ಇಟ್ಟುಕೊಂಡು ವ್ಯವಹಾರ ಮಾಡಬೇಕು ಎಂದಿದ್ದಾಳೆ. ನಿಧಾನವಾಗಿ ಮಾತನಾಡಿ ಚಿಲ್ಲರೆ ಕೊಡಿ ಎಂದಾಕ್ಷಣ ಏಕಾಏಕಿ ಮಹಿಳೆ, ಮೆಡಿಕಲ್ ಹುಡುಗಿಯನ್ನು ಅವಾಚ್ಯವಾಗಿ ನಿಂದಿಸಿದ್ದು ಅಲ್ಲದೇ ಹಲ್ಲೆ ಮಾಡಿದ್ದಾಳೆ.
ಫೋನ್ ಪೇ ಮಾಡಲು ಹೇಳಿದ್ದಕ್ಕೆ ಏಕಾಯೇಕಿ ಹಲ್ಲೆ ನಡೆಸಿದ ಯಾಸ್ಮಿನ್, ಬೇರೆ ಅಂಗಡಿಯಿಂದ ಚಿಲ್ಲರೆ ತರುವಂತೆ ಹೇಳಿ ಲಕ್ಷ್ಮೀ ಕೆನ್ನೆಗೆ ಬಾರಿಸಿದ್ದಾಳೆ.

ಸದ್ಯ ಜಗಳದ ವೀಡಿಯೋ ಮತ್ತು ಆಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ದಲಿತ ಯುವತಿಯ ಮೇಲೆ ನಡೆದ ಹಲ್ಲೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶವಾಗಿದೆ. ಕುಂದಾಪುರ ತಾಲೂಕು ಆಸ್ಪತ್ರೆಯಲ್ಲಿ ಲಕ್ಷ್ಮೀ ಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಜಾತಿನಿಂದನೆ, ದಲಿತ ದೌರ್ಜನ್ಯ, ಹಲ್ಲೆ ಪ್ರಕರಣ ದಾಖಲಾಗಿದೆ.
ಉಡುಪಿ ಎಸ್ ಪಿ ಹರಿರಾಮ್ ಶಂಕರ್ ಭೇಟಿ, ಲಕ್ಷ್ಮೀ ಆರೋಗ್ಯ ವಿಚಾರಣೆ ನಡೆಸಿದ್ದು, ಡಿ ವೈ ಎಸ್ ಪಿ ಪ್ರಕರಣದ ಕುರಿತು ತನಿಖೆ ಮಾಡುತ್ತಾರೆ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
https://youtu.be/fdlGEHnr330?si=j5fbRrCj7SzGXS9F