ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯ ಖಾರ್ವಿಕೇರಿಯ ಪರಿಸರದ ನಿವಾಸಿಗಳಿಗೆ ಹಲವು ವರ್ಷಗಳಿಂದ ಹಕ್ಕು ಪತ್ರಕ್ಕಾಗಿ ನಡೆಸಿದ ಹೋರಾಟಕ್ಕೆ, ಅಂತೂ ಫಲ ಸಿಗುವ ಲಕ್ಷಣಗಳು ಸನಿಹವಾಗಿದ್ದು ಇಂದು ನಿವಾಸಿಗಳು ಕುಂದಾಪುರ ಶಾಸಕರ ಕಚೇರಿಗೆ ಭೇಟಿ ನೀಡಿದ ಅವರು ಶಾಸಕ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿ ಪುಷ್ಪಗುಚ್ಛವನ್ನು ನೀಡಿ ಕೃತಜ್ಞತೆ ಸಲ್ಲಿಸಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿಯವರು ಸತತ ಪ್ರಯತ್ನದ ಫಲವಾಗಿ ಪುರಸಭಾ ವ್ಯಾಪ್ತಿಯಲ್ಲಿ ಹಕ್ಕು ಪತ್ರ ನೀಡಲು ಕಾನೂನಿನ ಅಭ್ಯಂತರ ಇಲ್ಲ ಎಂದು ಕಂದಾಯ ಆಯುಕ್ತರಿಂದ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಲಿಖಿತ ಆದೇಶ ಮಾಡಿದ್ದಾರೆ. ಇದರಿಂದ ಸ್ಥಳೀಯ ವಾಸ್ತವ್ಯ ಹೊಂದಿರುವ ಮೀನುಗಾರರಿಗೆ ಕೂಲಿ ಕಾರ್ಮಿಕರಿಗೆ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲು ಕ್ರಮವಾಗಿಸಬಹುದಾಗಿದೆ. ಇದರಿಂದ ಖಾರ್ವಿಕೇರಿ ಜನರಸಮಸ್ಯೆ ನಿವಾರಣೆ ಆಗುವಂತಾಗಿತ್ತು ಈ ಹಿನ್ನಲೆಯಲ್ಲಿ ನಿವಾಸಿಗಳು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಕೊಂಕಣ ಮಹಾಜನ ಸಂಘದ ಅಧ್ಯಕ್ಷ ರವಿ ಟಿ.ನಾಯ್ಕ, ಜಿ.ಮಾಜಿ ಅಧ್ಯಕ್ಷ ಕೆ.ಬಿ. ಖಾರ್ವಿ, ಕೊಂಕಣ ಖಾರ್ವಿ ಸಮಾಜದ ಪ್ರಮುಖರಾದ ಉಮಾನಾಥ ಖಾರ್ವಿ, ಪ್ರಕಾಶ್ ಖಾರ್ವಿ, ಸಂದೀಪ ಖಾರ್ವಿ, ದಿನಕರ ಖಾರ್ವಿ, ರವಿ ಖಾರ್ವಿ, ಲಕ್ಷ್ಮಣ ಖಾರ್ವಿ, ರಾಜು ಖಾರ್ವಿ, ಶೇಖರ್ ಖಾರ್ವಿ, ರತ್ನಾಕರ್ ಖಾರ್ವಿ, ಸದಾನಂದ ಖಾರ್ವಿ, ಸದಾನಂದ ಮದುಗುಡ್ಡೆ, ರಾಘವೇಂದ್ರ ಖಾರ್ವಿ, ಅಮೃತ ಪಾಂಡೆ, ಸಂದೀಪ ಎಸ್. ಎಸ್. ಹಾಗೂ ಇನ್ನಿತರರು ಉಪಸ್ಥಿತರಿದ್ದರು.