ಉಡುಪಿ : ಪಕ್ಕದ ರಾಜ್ಯವಾದ ಕೇರಳದಲ್ಲಿ ಕರ್ನಾಟಕ ಕ್ರಷಿಕೂಲಿಕಾರರಿಗೆ 60ವರ್ಷದ ನಂತರ 3000ಪಿಂಚಣಿ, ಮನೆ ಕಟ್ಟು 5ಸೆಂಟ್ಸ್ ಜಾಗ, ಹಾಗೂ ಕಲ್ಯಾಣ ಮಂಡಳಿ ಸವಲತ್ತುಗಳು ಸಿಗುತ್ತವೆ ಅದರೆ ಕರ್ನಾಟಕ ರಾಜ್ಯದಲ್ಲಿ ಯಾವುದು ಸಿಗುತ್ತಿಲ್ಲ.ಕೇಂದ್ರ ಸರಕಾರ ಪ್ರತಿವರ್ಷ ಬಜೆಟ್ ಅನುದಾನ ಕಡಿತಗೊಳಿಸಿ ಕೊಂಡು ಬರುತ್ತಿದೆ ಎಂದು ಸಮ್ಮೇಳನವನ್ನು ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘದ ರಾಜ್ಯ ಅಧ್ಯಕ್ಷರಾದ ಕಾಮ್ರೇಡ್ ಪುಟ್ಟುಮಾದು ಹೇಳಿದರು.

ಅವರು ಕುಂದಾಪುರ ಹಂಚು ಕಾರ್ಮಿಕರ ಭವನದಲ್ಲಿ ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘದ ಕುಂದಾಪುರ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ, ಮಾತನಾಡುತ್ತಾ, ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ಮಾಡುವ ನೌಕರರಿಗೆ ಪಂಚಾಯತ್ ಮಟ್ಟದಲ್ಲಿ ಸಮಸ್ಯೆಗಳ ಬಗ್ಗೆ ಸರಕಾರ ಗಮನ ಹರಿಸಬೇಕು, ತಿಂಗಳಿಗೆ 600ರೂ ವೆತನ ಹಾಗೂ 200ದಿನ ಕೆಲಸ ನೀಡಬೇಕೆಂದು ಒತ್ತಾಯಿಸಿದರು.

ಜಿ.ಡಿ.ಪಂಜು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಕವಿರಾಜ್. ಎಸ್.ಕಾಂಚನ್, ಬೈಂದೂರು ತಾಲೂಕು ಅಧ್ಯಕ್ಷರಾದ ಪದ್ಮಾವತಿ ಶಿರೂರು, ಜನವಾದಿ ಮಹಿಳಾ ಸಂಘದ ಉಡುಪಿ ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಉಪಸ್ಥಿತರಿದ್ದರು. ಸಂಘದ ಹಿರಿಯ ಸದಸ್ಯರಾದ ಕಮಲ ಬಸ್ರೂರು ಧ್ವಜಾರೋಹಣವನ್ನು ನೆರವೇರಿಸಿದರು. ಶೋಭಾ ಹುತಾತ್ಮ ಸಂಗಾತಿಗಳಿಗೆ ಶ್ರದ್ಧಾಂಜಲಿ ಯನ್ನು ಮಂಡಿಸಿದರು. ನಾಗರತ್ನ ರಾಮನಗರ ಕಾರ್ಯಕ್ರಮ ನಿರೂಪಿಸಿದರು, ನಾಗರತ್ನ ನಾಡ ಸ್ವಾಗತಿಸಿ, ವಂದಿಸಿದರು. ಇದೇ ಕಾರ್ಯಕ್ರಮದಲ್ಲಿ ಮುಂದಿನ 3 ವರ್ಷಗಳಿಗೆ 24 ಜನರ ಹೊಸ ಸಮಿತಿ ಆಯ್ಕೆ ಮಾಡಲಾಯಿತು.



