ಒಳ್ಳೆಯವರು ಯಾಕೆ ಜಗತ್ತಿನಲ್ಲಿ ಹೆಚ್ಚು ನೋವು ಅನುಭವಿಸಬೇಕು? ಈ ಪ್ರಶ್ನೆ ಬಹುಶಃ ಎಲ್ಲ ಕಾಲಗಳಲ್ಲಿಯೂ ಮನುಷ್ಯನು ತನ್ನ ಹೃದಯದ ತಳಮಳದಿಂದ ಕೇಳಿಕೊಂಡ ಪ್ರಶ್ನೆ. ಆದರೆ ಉತ್ತರ ಎಂದಿಗೂ ಲೆಕ್ಕದ ಮೇಲೆ ನಿಲ್ಲದು. ಅದು ತಳಸಿದ್ಧವಾಗಿರುತ್ತದೆ. ಆಧ್ಯಾತ್ಮದಲ್ಲಿ, ಧರ್ಮದಲ್ಲಿ, ತಪಸ್ಸಿನಲ್ಲಿ, ನೋವಿನ ಪಾವಿತ್ರ್ಯದಲ್ಲಿ.ಒಬ್ಬರು ಒಳ್ಳೆಯವನಾಗಿರುತ್ತಾರೆ ಎಂದರೆ ಅವರು ಸತ್ಯವನ್ನು ಎತ್ತಿ ಹಿಡಿದವರಾಗಿರುತ್ತಾರೆ. ಅವರು ತನ್ನ ಸ್ವಾರ್ಥಕ್ಕೆ ಬದಲು ಪರರ ಹಿತವನ್ನು ಬಯಸುವವರಾಗಿರುತ್ತಾರೆ. ಈ ಲೋಕದ ಧರ್ಮದ ದಾರಿ, ಶುದ್ಧತೆಯ ಶಕ್ತಿ ಇವನ್ನೆಲ್ಲ ಅವರು ತನ್ನ ಪಕ್ಕದಲ್ಲಿ ಇಟ್ಟುಕೊಂಡಿರುವರು. ಹಾಗಾದರೆ, ಏಕೆ ಅವರ ಮೇಲೆಯೇ ಬದುಕಿನ ಬಂಡೆಗಳ ಸುರಿಮಳೆ ಬೀಳುತ್ತದೆ?
ಈ ಪ್ರಶ್ನೆಗೆ ಉತ್ತರ ಹುಡುಕಬೇಕಾದರೆ, ಮೊದಲು ಮನಸ್ಸನ್ನು ಸ್ವಲ್ಪ ದೇವರ ಕಡೆಗೆ ತಿರುಗಿಸಬೇಕಾಗುತ್ತದೆ. ಸತ್ಕರ್ಮ ಮಾಡುವವರು ದೇವರೊಂದಿಗೆ ಹೆಚ್ಚು ನಿಕಟ ಸಂಬಂಧ ಹೊಂದಿರುತ್ತಾರೆ. ಅವರು ಬದಲಾವಣೆಯ ಕೈಗೊಳ್ಳುವ ಸಾಮರ್ಥ್ಯವಿರುವ ಆತ್ಮ. ಅವರ ಮೂಲಕ ಈ ಲೋಕದ ನಾಸ್ತಿಕತೆಯ, ಅಹಂಕಾರದ, ದುಷ್ಟತನದ ಒತ್ತಡ ಕಡಿಮೆಯಾಗಬೇಕು. ಇವರ ಚಿಂತನೆ, ಇವರ ಬದುಕು, ಇವರ ತಪಸ್ಸು ಎಲ್ಲವನ್ನೂ ದೇವರು ಶಕ್ತಿಯ ಮಾರ್ಗವಾಗಿ ರೂಪಿಸುತ್ತಾನೆ. ಈ ಶಕ್ತಿಯು ಯಾವಾಗಲೂ ಸುಖದ ಚಡಪಡಿಕೆಯಲ್ಲಿಲ್ಲ, ಅದು ಕಷ್ಟದ ಕಡುಬಿಸಿಲಿನಲ್ಲಿ ಬೆಳೆಯುತ್ತದೆ.
ಒಳ್ಳೆಯವರಿಗೆ ಬರುವ ಕಷ್ಟಗಳು ದಂಡವಲ್ಲ. ಅದು ಶುದ್ಧಿಗೊಳ್ಳುವ ಯಾಗ. ನಗ್ನತೆಯ ನಡುವೆ ನಿತ್ಯತೆಯ ಅನುಭವ. ಒಳ್ಳೆಯವರು ನೋವನ್ನು ನೋವೆಂದು ಭಾವಿಸುವವರೇ ಅಲ್ಲ, ಆತ್ಮ ಶುದ್ಧಿಯಾದಾಗ ಮಾತ್ರ ಬ್ರಹ್ಮ ತತ್ವ ಅವರೊಳಗೆ ಬೀಳುತ್ತದೆ.
ರಾಮನಿಗೆ 14 ವರ್ಷ ವನವಾಸ,
ಸೀತೆಯ ಶುದ್ಧತೆಯ ಪರೀಕ್ಷೆ,
ಹರಿಶ್ಚಂದ್ರನಿಗೆ ತಪಸ್ಸಾಗಿ ಬಂದ ಬದುಕು.
ಪಾಂಡವರಿಗೆ ಆದ ಅವಮಾನ.
ಇವರೆಲ್ಲರೂ ಒಳ್ಳೆಯವರೇ. ಆದರೆ ದೇವರು ಇವರನ್ನು ಕಷ್ಟಗಳಿಂದ ಮುಳುಗಿಸಿದ್ದ. ಏಕೆಂದರೆ ಇವರು ಶಕ್ತಿಯ ಶ್ರೇಷ್ಠ ರೂಪಕ್ಕೆ ತಕ್ಕವರು. ಇವರು ಈ ಲೋಕದ ಧರ್ಮದ ಬೀಜವಾಗಬೇಕಾಗಿತ್ತು. ಒಳ್ಳೆಯವರು ಪಾಪದ ಮುಕ್ತಿಗೆ ಸಂಬಂಧಿಸಿದವರು. ಅವರು ಕೇವಲ ತನ್ನೊಬ್ಬರ ಜೀವನ ದಾರಿ ನೋಡಿಕೊಳ್ಳುವರಲ್ಲ.ಅವರೊಳಗೆ ಸಾವಿರಾರು ಜೀವಗಳು ಆಶ್ರಯಪಟ್ಟಿವೆ. ಅವರ ತಪಸ್ಸು ಈ ಜಗತ್ತಿಗೆ ಋಣ ತೀರಿಸುವ ಹಾದಿಯಾಗಿದೆ. ಅದಕ್ಕೇ ದೇವರು ಅವರನ್ನು ಆಯ್ಕೆ ಮಾಡಿದ್ದಾನೆ—ಇತರರ ಮುಕ್ತಿಗಾಗಿ, ಭೂಮಿಯ ಶುದ್ಧಿಗಾಗಿ.
ಈ ಜಗತ್ತಿನಲ್ಲಿ ಶುದ್ಧ ಮನಸ್ಸು, ಶುದ್ಧ ಜೀವನ, ಶುದ್ಧ ಉದ್ದೇಶ ಇಟ್ಟು ಬದುಕು ವವರು ಕಷ್ಟದಿಂದ ಪಾರಾಗುವುದಿಲ್ಲ. ಆದರೆ ಅವರು ಮಾತ್ರ ಅವುಗಳ ಮಧ್ಯೆ ಶ್ರೇಷ್ಠವಾಗುತ್ತಾರೆ . ಭೂಮಿಗೆ ನೀರು ಬೇಕಾದಂತೆ, ದೇವರಿಗೆ ಧರ್ಮಪರರ ತ್ಯಾಗ ಬೇಕು. ಅಷ್ಟು ಶ್ರೇಷ್ಠತೆಯನ್ನು ದೇವರು ಸಾಧಾರಣರೊಳಗೆ ಹೊರತರಲಾರ.
_Dharmasindhu Spiritual Life
