ಉಡುಪಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 28 ರಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಲಿರುವ ಕುರಿತು ಸ್ವತಃ ಟ್ವೀಟ್ ಮಾಡಿದ್ದು, ಉಡುಪಿ ಭೇಟಿಯ ಕುರಿತು ತನ್ನ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಮಹಾಸಮಾರಂಭದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ಭಾಗವಹಿಸಲಿದ್ದು,

ನಾಳೆ ನವೆಂಬರ್ 28 ರಂದು ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಭೇಟಿ ನೀಡುತ್ತಿರುವುದು ನನಗೆ ಗೌರವ ತಂದಿದೆ. ಗೀತೆಯ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಟ್ಟುಗೂಡಿಸುವ ವಿಶೇಷ ಸಭೆ ಇದಾಗಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾಗಿ ಸಮಾಜ ಸೇವೆ ಮತ್ತು ಸಂಸ್ಕೃತಿ ರಕ್ಷಣೆಯಲ್ಲಿ ಮಠವು ಮಹತ್ವದ ಪಾತ್ರವಹಿಸಿದೆ,” ಎಂದು ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಆಗಮಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಭಕ್ತರು, ಸಾಧು–ಸಂತರು, ವಿದ್ವಾಂಸರು ಮತ್ತು ವಿವಿಧ ವರ್ಗಗಳ ನಾಗರಿಕರು ಸೇರಿ ಏಕಲಕ್ಷ ಮಂದಿ ಭಗವದ್ಗೀತೆಯ ಸಾಮೂಹಿಕ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶ್ರೀಮದ್ ಭಗವದ್ಗೀತೆಯ ಈ ವಿಶಾಲ ಪಠಣಕ್ಕೆ ಪ್ರಧಾನ ಮಂತ್ರಿ ಸಾಕ್ಷಿಯಾಗಲಿದ್ದಾರೆ.

ಸುವರ್ಣ ತೀರ್ಥ ಮಂಟಪ ಉದ್ಘಾಟನೆ ಉಡುಪಿ ಶ್ರೀಕೃಷ್ಣ ದೇಗುಲದ ಗರ್ಭಗುಡಿಯ ಮುಂಭಾಗದಲ್ಲಿರುವ ಸುವರ್ಣ ತೀರ್ಥ ಮಂಟಪವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಭಕ್ತ ಕನಕದಾಸರು ಶ್ರೀಕೃಷ್ಣನ ದಿವ್ಯ ದರ್ಶನ ಪಡೆದ ಸ್ಥಳವಾದ ಕನಕನ ಕಿಂಡಿಗೆ ಪ್ರಧಾನ ಮಂತ್ರಿ ಮೋದಿ ಕನಕ ಕವಚವನ್ನು ಸಮರ್ಪಿಸಲಿದ್ದಾರೆ.



