Tuesday, March 3, 2026

spot_img

ಉಡುಪಿ ಲೋಕಾಯುಕ್ತ ಅಧಿಕಾರಿಗಳ ತಂಡ ಮಣಿಪಾಲ ರಜತಾದ್ರಿ ಕಚೇರಿಗೆ ಧಾಳಿ

ಉಡುಪಿ: ಸಾರ್ವಜನಿಕರ ವ್ಯಾಪಕ ದೂರಿನ್ವಯ ಉಡುಪಿ ಲೋಕಾಯುಕ್ತ ಅಧಿಕಾರಿಗಳ ತಂಡ ಇಂದು ಮಣಿಪಾಲ ರಜತಾದ್ರಿ ಕಚೇರಿಯಲ್ಲಿರುವ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ಕಚೇರಿಯಲ್ಲಿ ಹಲವು ಸಮಯಗಳಿಂದ ಸಾರ್ವಜನಿಕರ 9/11 ಮತ್ತು ಏಕವಿನ್ಯಾಸದ ಕಡತಗಳನ್ನು ವಿನಾಹ ಕಾರಣ ಬಾಕಿ ಇರಿಸಿದ್ದ ಬಗ್ಗೆ ಉಡುಪಿ ಲೋಕಾಯುಕ್ತ ಕಚೇರಿಗೆ ದೂರು ಬಂದಿರುತ್ತದೆ.

ಆದ್ದರಿಂದ ಲೋಕಾಯುಕ್ತ ಅಧಿಕಾರಿಗಳು‌ ಇಂದು ಮಧ್ಯಾಹ್ನ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ದಿಢೀರ್ ದಾಳಿ ನಡೆಸಿದ್ದಾರೆ.

ಸಾರ್ವಜನಿಕರ ಕಡತಗಳ ಬಾಕಿ ಇರುವ ಬಗ್ಗೆ ದೂರು ನೀಡುವರು ಹಾಗೂ ಈ ಬಗ್ಗೆ ಮಾಹಿತಿ ಬೇಕಾದಲ್ಲಿ ತಕ್ಷಣ ಜಿಲ್ಲಾಧಿಕಾರಿಗಳ ಕಚೇರಿಯ ಬಳಿ‌ ಇರುವ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಗೆ ಭೇಟಿ ನೀಡಬಹುದು ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles