Thursday, October 23, 2025

spot_img

ಉಡುಪಿ ನಗರಸಭೆಯಲ್ಲಿ ಮೂರು ನೂತನ ಸ್ಥಾಯಿ ಸಮಿತಿಗಳನ್ನು ರಚನೆ

ಉಡುಪಿ : ಆಡಳಿತವನ್ನು ಸರಳಿಕರಣ ಗೊಳಿಸಲು ಸ್ಥಳೀಯ ಸಂಸ್ಥೆಗಳ ಸ್ಥಾಯಿ ಸಮಿತಿಗಳನ್ನು ವಿಂಗಡಿಸುವ ರಾಜ್ಯ ಸರ್ಕಾರದ ನಿರ್ದೇಶನದಂತೆ ಉಡುಪಿ ನಗರಸಭೆಯಲ್ಲಿ ಮೂರು ನೂತನ ಸ್ಥಾಯಿ ಸಮಿತಿಗಳನ್ನು ರಚನೆ ಮಾಡಿ ಅದರ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ಸರ್ಕಾರದ ನಿರ್ದೇಶನದಂತೆ ನಿರ್ಧರಣೆ ಹಣಕಾಸು ಮತ್ತು ಅಪಿಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಂಜುನಾಥ್ ಮಣಿಪಾಲ, ಪಟ್ಟಣ ಯೋಜನೆ ಮತ್ತು ಪುರೋಭೀವ್ರದ್ದಿ  ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಿಜಯ್ ಕೊಡವೂರು, ಲೆಕ್ಕಪತ್ರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಟಿ.ಜಿ ಹೆಗಡೆ ಯವರನ್ನು ಬುಧವಾರ ಸತ್ಯಮೂರ್ತಿ ಸಭಾಂಗಣದಲ್ಲಿ  ಅವಿರೋಧವಾಗಿ ಆಯ್ಕೆ ಮಾಡಲಾಯಿತು.

 ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ  ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷರಾದ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ  ಸುಂದರ್ ಜೆ ಕಲ್ಮಾಡಿ, ಪೌರಾಯುಕ್ತರಾದ ಮಹಂತೇಶ್, ನಗರಸಭಾ ಸದಸ್ಯರು, ಅಧಿಕಾರಿಗಳು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles