ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆಗೆ ಯಾವುದೇ ಮಾಹಿತಿ ನೀಡದೆ ಬಸ್ ನಿಲ್ದಾಣ ನಿರ್ಮಿಸುತ್ತಿರುವ ಘಟನೆ ನಡೆದಿದೆ.

ಉಡುಪಿ ನಗರ ವ್ಯಾಪ್ತಿಯ ಲಕ್ಷ್ಮೀ ನಗರ ಲೇ ಔಟ್ ಬಳಿ ನಗರ ಸಭೆ ಅನುಮತಿಯಿಲ್ಲದೆ ,ಲೋಕಪಯೋಗಿ ರಸ್ತೆ ಸಮೀಪ ಅನಧಿಕೃತವಾಗಿ ಬಸ್ ಸ್ಡ್ಯಾಂಡ್ ನಿರ್ಮಾಣ ಕಾರ್ಯ ನಡೆದಿದೆ.

ನಗರದಲ್ಲಿನ ಲೋಕಪಯೋಗಿ ರಸ್ತೆಗೆ ತಾಗಿಕೊಂಡು ಬಸ್ ನಿಲ್ದಾಣ ನಿರ್ಮಿಸಿರುವುದಕ್ಕೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದರೂ ಕೂಡ , ಇದನ್ನ ಲೆಕ್ಕಿಸದೇ ಕಟ್ಟಲಾಗಿದೆ ಎಂದು ಸ್ಥಳೀಯರು ಅರೋಪಿಸಿದ್ದಾರೆ. ಈ ಬಗ್ಗೆ ಸಾರ್ವಜನಿಕರು ನಗರಸಭೆ ಪೌರಯುಕ್ತರು, ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದಾರೆ.


