ಉಡುಪಿ : ಬಡಗುಬೆಟ್ಟು ಗ್ರಾಮದ ರಾಜೀವ ನಗರ ಬಸ್ ನಿಲ್ದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟವಾಡುತ್ತಿದ್ದವರನ್ನು ಮಣಿಪಾಲದ ಪೊಲೀಸ್ ರು ಬಂಧಿಸಿದ್ದಾರೆ. ಜಯಂತ್ ಪೂಜಾರಿ (37), ಶರಣಪ್ಪ ಪೂಜಾರಿ (45), ಈಶ (36), ಹಾಲೇಶ (35) ಬಂಧಿತ ಆರೋಪಿಗಳು.

ಆರೋಪಿಗಳು ಉಡುಪಿ ತಾಲೂಕು 80 ಬಡಗುಬೆಟ್ಟು ಗ್ರಾಮದ ರಾಜೀವ ನಗರದ ಬಸ್ ನಿಲ್ದಾಣದ ಬಳಿ ನೀರಿನ ಟ್ಯಾಂಕಿನ ಕೆಳಗೆ ಇರುವ ಸಾರ್ವಜನಿಕ ಮೈದಾನದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟವಾಡುತ್ತಿದ್ದಾಗ ಪೊಲೀಸ್ ರು ಧಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತರಿಂದ ನಗದು, ಆಟಕ್ಕೆ ಉಪಯೋಗಿಸುವ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.


