ಉಡುಪಿ : ದಿವಂಗತ ಜಾರ್ಜ್ ಫರ್ನಾಂಡಿಸ್ ಅವರ ಹೋರಾಟದ ಫಲ ಸ್ವರೂಪವಾಗಿ ಕೊಂಕಣ ರೈಲ್ವೆ ನಿರ್ಮಾಣವಾಗಿದೆ. ನಾನು ಆ ಹೋರಾಟದ ವೇಳೆ ವಿದ್ಯಾರ್ಥಿ ನಾಯಕನಾಗಿದ್ದೆ, ಜಾರ್ಜ್ ಫರ್ನಾಂಡಿಸ್ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ದೊರಕಿತ್ತು. ಕೊಂಕಣ ರೈಲ್ವೆ ಅಭಿವೃದ್ಧಿ ವಿಚಾರವಾಗಿ ಅಧ್ಯಯನ ನಡೆಯುತ್ತಿದೆ ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರು ಈಗಾಗಲೇ ಮಹಾರಾಷ್ಟ್ರದ ಸರಕಾರದ ಜೊತೆ ಮಾತುಕತೆಗೆ ಮುಂದುವರೆದಿದ್ದಾರೆ. ಕೊಂಕಣ ರೈಲ್ವೆ ಭಾರತೀಯ ರೈಲ್ವೆ ಜೊತೆ ಸೇರಿಸುವ ವಿಚಾರವಾಗಿ ನಾವು ಮುಂದುವರೆಯಲಿದ್ದೇವೆ ಎಂದು ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಅವರು ಉಡುಪಿಗೆ ಆಗಮಿಸಿದ ವೇಳೆ ಕೊಂಕಣ ರೈಲ್ವೆ ಅಭಿವೃದ್ಧಿ ಮತ್ತು ಭಾರತೀಯ ರೈಲ್ವೆ ಜೊತೆ ಕೊಂಕಣ ರೈಲ್ವೆ ವಿಲೀನ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ಕೊಂಕಣ ರೈಲ್ವೆ ಅಭಿವೃದ್ಧಿ ಹಿನ್ನಲೆ ಮೂರು ಜನ ಜನರಲ್ ಮ್ಯಾನೇಜರ್ ಗಳನ್ನು ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಯಿಸಿ ಪ್ರಸ್ತಾವನೆ ಮಾಡಿದ್ದೇವೆ. ಇದಕ್ಕೆ ಸಂಬಂಧಿಸಿದ ಐದು ರಾಜ್ಯಗಳಿಗೆ ಮಾಹಿತಿಯನ್ನು ಕೊಡಲಾಗಿದೆ ಕೇರಳ ರಾಜ್ಯದವರು ಏನ್ ಓ ಸಿ ಕೊಟ್ಟಿದ್ದಾರೆ ಗೋವಾ, ಕರ್ನಾಟಕ, ಮಹಾರಾಷ್ಟ್ರ ಅನುಮತಿ ನೀಡಬೇಕಾಗಿದೆ. ವಿಲೀನ ವಿಚಾರವಾಗಿ ಪುದುಚೆರಿಯವರು ನಮಗೇನು ಸಮಸ್ಯೆ ಇಲ್ಲ ಎಂದು ಎನ್ ಓ ಸಿ ನೀಡಿದ್ದಾರೆ, ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಯುತ್ತಿದೆ. ಕೊಂಕಣ ರೈಲ್ವೆಯಲ್ಲಿನ ಸದ್ಯದ ಪರಿಸ್ಥಿತಿಯೇ ಮುಂದುವರಿಯುವುದಿಲ್ಲ, ಯಾವ ರೀತಿಯ ವ್ಯವಸ್ಥೆಗಳು ಆಗಬೇಕು ಅದು ಆಗಲಿದೆ. ಎಂದರು.

ಅಂಕೋಲ ಮತ್ತು ಹುಬ್ಬಳ್ಳಿ ನಡುವೆ 17 ಸಾವಿರ ಕೋಟಿ ರೂಪಾಯಿ ಯೋಜನೆ
ಇನ್ನು ಅಂಕೋಲ ಮತ್ತು ಹುಬ್ಬಳ್ಳಿ ರೈಲ್ವೆ ಕಾಮಗಾರಿ ಬಗ್ಗೆ ಮಾತನಾಡಿದ ಸಚಿವರು, ಅಂಕೋಲ ಮತ್ತು ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಹಳಿಯನ್ನ ಸಮಾನಾಂತರವಾಗಿ ತರುವ ಯೋಜನೆ ಸಿದ್ಧವಾಗಿದೆ. ಸುಮಾರು 17 ಸಾವಿರ ಕೋಟಿ ರೂಪಾಯಿಗಳನ್ನು ಈ ಯೋಜನೆಗೆ ವ್ಯಯಿಸಲಾಗುತ್ತಿದೆ. ಕೊಂಕಣ ರೈಲ್ವೆ ಅಭಿವೃದ್ಧಿ ವಿಚಾರವಾಗಿ ಸವಿಸ್ಕೃತವಾದ ಚರ್ಚೆ ನಡೆಯುತ್ತಿದೆ, ಮುಂದಿನ ದಿನಗಳಲ್ಲಿ ಬದಲಾವಣೆಗಳನ್ನು ನೀವು ಕಾಣಬಹುದು. ಕೊಂಕಣ ರೈಲ್ವೆ ಯನ್ನ ಭಾರತೀಯ ರೈಲ್ವೆ ಜೊತೆ ಒಗ್ಗೂಡಿಸುವ ವಿಚಾರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಸರಕಾರದ ನಡುವೆ ಮಾತುಕತೆಗಳು ನಡೆಯಬೇಕಿದೆ. ಈ ವರ್ಷದ ಡಿಸೆಂಬರ್ ಒಳಗೆ ಕರ್ನಾಟಕ ಮತ್ತು ಮಹಾರಾಷ್ಟ ಈ ಎರಡು ರಾಜ್ಯಗಳಿಂದ ಅನುಮತಿಯನ್ನು ಪಡೆದುಕೊಳ್ಳುವ ವಿಶ್ವಾಸವಿದೆ. ಅಂಕೋಲ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ವ್ಯಾಜ್ಯ ಇದೆ ಆದರೆ ಈಗ ಇದ್ದ ಹಾಗೆ ಉಳಿದುಕೊಂಡರೆ ಮುಂದೆ ಏನಾಗಬಹುದು ಒಮ್ಮೆ ಯೋಚಿಸಿ ?? ಕಾರವಾರದ ಬಂದರು ಏನಾಗಬಹುದು ಎನ್ನುವುದನ್ನು ಕೂಡ ಆಲೋಚಿಸಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಗತಿ ಏನು ??? ಒಂದು ಬಂದರು ನಿಂದ ಎಷ್ಟು ಸಾವಿರ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂಬುದನ್ನು ಕೂಡ ಗಮನ ಹರಿಸಬೇಕಾಗುತ್ತದೆ. ಇದರ ಸಾಧಕ ಬಾಧಕಗಳನ್ನು ಕೂಡ ಚರ್ಚೆ ಮಾಡಬೇಕಾಗುತ್ತದೆ. ಇದು ಐವತ್ತು ವರ್ಷಗಳ ಹಿಂದೆ ನಡೆಯಬೇಕಾಗಿದ್ದ ಕಾಮಗಾರಿ ಪಕ್ಕದ ಕೇರಳ ತಮಿಳುನಾಡು ರಾಜ್ಯಗಳಲ್ಲಿ ಬಂದರು ಹೇಗೆ ಎನ್ನುವುದನ್ನು ಒಮ್ಮೆ ಗಮನಿಸಿ. ಬಂದರು ನಿಂದ ಯಾವ ಅನುಕೂಲಗಳಿವೆ ಅದರಿಂದ ಯಾವ ಉತ್ಪತ್ತಿ ಇದೆ ಎಂದು ನಿಮ್ಮ ಗಮನಕ್ಕೆ ಬರುತ್ತದೆ. ಮಂಗಳೂರು ಮತ್ತು ಕಾರವಾರ ಬಂದರುಗಳು ಮೇಲ್ದರ್ಜೆಗೆ ಏರಬೇಕು ಎನ್ನುವ ಮಹಾದಾಸೆ ನನ್ನದು ನಮ್ಮ ರೈಲ್ವೆ ಮಂತ್ರಿಗಳು ಅಶ್ವಿನಿ ವೈಷ್ಣವ ಅವರು ಎಲ್ಲಾ ರಾಜ್ಯದ ಸಹಮತವನ್ನು ಪಡೆದು ಇಲ್ಲಿನ ಸಮಸ್ಯೆಗಳನ್ನ ಪರಿಹರಿಸಿ ಅಭಿವೃದ್ಧಿಯ ದೆಸೆಗೆ ಭಾರತೀಯ ರೈಲ್ವೆಯನ್ನು ಮುನ್ನಡೆಸಲಿದ್ದೇವೆ ಎಂದರು.



